Recent Posts

Monday, January 20, 2025
ಸುದ್ದಿ

ವಿವೇಕಾನಂದ ಕಾಲೇಜಿನಲ್ಲಿ ವಾರ್ಷಿಕೋತ್ಸವ: ಸಾಂಸ್ಕೃತಿಕ ಕಲರವ – ಕಹಳೆ ನ್ಯೂಸ್

ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ವಾರ್ಷಿಕೋತ್ಸವದ ಪ್ರಯುಕ್ತ ಶುಕ್ರವಾರ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ನರೆದವರ ಮನಸೆಳೆಯಿತು. ಮಧ್ಯಾಹ್ನ 12.30ರಿಂದ ಆರಂಭವಾದ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಸಂಜೆಯ ತನಕ ನಿರಂತರವಾಗಿ ನಡೆಯಿತು.

ಭರತನಾಟ್ಯ, ಮೋಹಿನಿಯಾಟಂ, ಶಾಸ್ತ್ರೀಯ ನೃತ್ಯಗಳು ನೃತ್ಯಪ್ರಿಯರ ಇಂಗಿತವನ್ನು ನೀಗಿಸಿದರೆ. ಶಾಸ್ತ್ರೀಯ ಸಂಗೀತ, ಸಮೂಹ ಗಾಯನ, ಚಲನಚಿತ್ರದ ಹಾಡುಗಳನ್ನು ಹಾಡಿ ಗಾನ ಪ್ರಿಯರನ್ನು ಸೆಳೆದರು. ಭಾವಗೀತೆಗಳು ಹಾಡಿ ಹಿಂದಿನ ಭಾವನೆಗಳನ್ನು ವ್ಯಕ್ತಪಡಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಫನ್ನಿ ಡ್ಯಾನ್ಸ್‍ಗಳ ಮೂಲಕ ವಿದ್ಯಾರ್ಥಿಗಳನ್ನು ರಂಜಿಸುವ ಕಾರ್ಯಕ್ರಮವಂತೂ ನೆರೆದಿದ್ದವರನ್ನು ಮನೋರಂಜನೆಯ ಲೋಕಕ್ಕೆ ಕೊಂಡೊಯ್ಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ದೇಶಪ್ರೇಮ ಮೂಡಿಸಿದ ಎನ್‍ಸಿಸಿ ವಿದ್ಯಾರ್ಥಿಗಳ ಕಾರ್ಯಕ್ರಮ
ಎನ್‍ಸಿಸಿ ವಿದ್ಯಾರ್ಥಿಗಳು ರಾಷ್ಟ್ರ ರಕ್ಷಣೆಯನ್ನು ಮಾಡುತ್ತಿರುವ ಸೈನಿಕರ ಜೀವನವನ್ನು ಕಣ್ಣಿಗೆ ನಾಟುವಂತೆ ಕಾರ್ಯಕ್ರಮವನ್ನು ನೀಡಿದರು. ಇದು ಸೇನೆ ಉಗ್ರರರನ್ನು ನಿಗ್ರಹಿಸುವ ಕಾರ್ಯಾಚರಣೆಯನ್ನು ಪ್ರಸ್ತುತ ಪಡಿಸಿತು.

ಇಡೀ ಸಾಂಸ್ಕೃತಿಕ ಕಾರ್ಯಕ್ರಮದ ಮಧ್ಯೆ ಸೈನಿಕರ ಪ್ರಾಣ ತ್ಯಾಗಕ್ಕೆ ಅಂತಿಮ ನಮನವನ್ನು ಸಲ್ಲಿಸುವ ಕಾರ್ಯಕ್ರಮ ದೇಶ ಭಕ್ತಿ, ರಾಷ್ಟ್ರ ಪ್ರೇಮವನ್ನು ಹುಟ್ಟಿಸುವ ಮೂಲಕ ಸಭಿಕರನ್ನು ಒಂದು ನಿಮಿಷ ಎದ್ದುನಿಂತು ಸಲಾಂ ಮಾಡುವಂತೆ ಮಾಡಿತು.

ಉಗ್ರರ ಮಟ್ಟ ಹಾಕಲು ನಡೆಸುವ ಹೋರಾಟ ಮತ್ತು ಅದರಲ್ಲಿ ಯೋಧ ಹುತಾತ್ಮನಾಗುವ ಸನ್ನಿವೇಶವವಂತು ನೋಡುಗರ ಕಣ್ಣನ್ನು ನೀರು ಆವರಿಸುವಂತೆ ಮಾಡಿದ್ದು ಸತ್ಯ.

“ಇನ್‍ಕ್ರೆಡಿಬಲ್ ಇಂಡಿಯಾ” ಎಂಬ ಮೂಕ ಅಭಿನಯ, ದೇಶ ಭಕ್ತಿಯ ಕುರಿತ ಪ್ರಹಸನ, ಯೋಗ ಕಾರ್ಯಕ್ರಮಗಳನ್ನು ಹೊಸತನ್ನು ನೀಡಿ ಪ್ರೇಕ್ಷಕರಲ್ಲಿ ಅಭಿಮಾನವನ್ನು ಹುಟ್ಟಿಸಿದವು. ರೆಟ್ರೋ ಡ್ಯಾನ್ಸ್, ಫ್ಯೂಷನ್ ಡ್ಯಾನ್ಸ್, ಕೂರ್ಗ್ ವಾಲಗ ಡ್ಯಾನ್ಸ್, ಸೆಮಿ ಕ್ಲಾಸಿಕಲ್ ಫ್ಯೂಷನ್‍ಗಳ ಮೂಲಕ ಹೊಸ ನಾಟ್ಯ ವಿಧಾನಗಳನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು. ಉಪನ್ಯಾಸಕರು ವಿದ್ಯಾರ್ಥಿಗಳಿಗಿಂತ ಏನು ಕಡಿಮೆ ಇಲ್ಲ ಎಂಬಂತೆ ತಾವು ನೃತ್ಯವನ್ನು ಮಾಡುವ ಮೂಲಕ ವಿದ್ಯಾರ್ಥಿಗಳನ್ನು ನಿಬ್ಬೆರಗಾಗಿಸಿದರು.

ಕಾರ್ಯಕ್ರಮದ ಮುಕ್ತಾಯದಲ್ಲಿ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕ, ಉಪನ್ಯಾಸಕೇತರ ಸಿಬ್ಬಂದಿಗಳು ಸುಮಾರು ಎರಡು ಗಂಟೆಗಳ ಕಾಲ “ಮಹಿಷ ಮರ್ಧಿನಿ” ಯಕ್ಷಗಾನ ಕಾರ್ಯಕ್ರಮವನ್ನು ನೀಡಿದರು. ಇದು ಯಕ್ಷಗಾನ ಕಲೆಯನ್ನು ಪ್ರೋತ್ಸಾಹಿಸುವಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಇಂತಹ ಕಲೆಯನ್ನು ಬೆಳೆಸುವಲ್ಲಿ ಇಲ್ಲಿ ನಡೆದ ಯಕ್ಷಗಾನ ಸಾಕ್ಷಿಯಾಯಿತು.