Monday, January 20, 2025
ಸುದ್ದಿ

ಗಡಿ ಪ್ರದೇಶದಲ್ಲಿ ಯೋಧರು ನಡೆಸಿದ ಹೋರಾಟವನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ಸರಿಯಲ್ಲ: ಖಾದರ್ – ಕಹಳೆ ನ್ಯೂಸ್

ಪುತ್ತೂರು: ನಮ್ಮ ದೇಶದ ಗಡಿ ಪ್ರದೇಶದಲ್ಲಿ ಯೋಧರು ನಡೆಸಿದ ಹೋರಾಟವನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ಸರಿಯಲ್ಲ ಎಂದು ಸಚಿವ ಖಾದರ್ ಪುತ್ತೂರಿನಲ್ಲಿ ಕಿಡಿಕಾರಿದರು. ಇದು ಕರ್ನಾಟಕ ರಾಜ್ಯಕ್ಕೆ ಕಪ್ಪು ಚುಕ್ಕೆ ಎಂದು ಇದೇ ವೇಳೆ ಹೇಳಿದರು.

ಪುತ್ತೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಪಾಕಿಸ್ತಾನದಲ್ಲಿರುವ ಉಗ್ರರ ಅಡಗುದಾಣಗಳ ಮೇಲೆ ಭಾರತೀಯ ಯೋಧರು ನಡೆಸಿದ ದಾಳಿಯಿಂದಾಗಿ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಲಾಭವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೀಡಿರುವ ಹೇಳಿಕೆಗೆ ಖಾದರ್ ಕಿಡಿಕಾರಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ನಮ್ಮ ವೀರ ಯೋಧರು ಹೋರಾಟ ಹಾಗೂ ಜೀವ ತ್ಯಾಗ ಮಾಡಿದ ಸಂದರ್ಭದಲ್ಲಿ ಇಡೀ ದೇಶದ ಜನತೆ ಅವರ ಮತ್ತು ಕುಟುಂಬದ ಪರವಾಗಿ ಇರಬೇಕು ಎಂದರು. ಆದರೆ ಇದನ್ನೇ ರಾಜಕೀಯವಾಗಿ ಬಳಸಿಕೊಳ್ಳುವುದು ಸರಿಯಲ್ಲ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು