Monday, January 20, 2025
ಸುದ್ದಿ

ಶರತ್ ಮಡಿವಾಳ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ನ್ಯಾಯಾಲಯಕ್ಕೆ ಹಾಜರು – ಕಹಳೆ ನ್ಯೂಸ್

ಬಂಟ್ವಾಳ: ಆರ್.ಎಸ್.ಎಸ್.ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯೋರ್ವ ಇಂದು ಬಿಸಿರೋಡಿನ ನ್ಯಾಯಾಲಯಕ್ಕೆ ಹಾಜರಾಗಿದ್ದಾನೆ.

2017 ಜುಲೈ 4 ರಂದು ಶರತ್ ಮಡಿವಾಳ ಅವರ ಲಾಂಡ್ರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸುಮಾರು 10 ಗಂಟೆಗೆ ಬೈಕಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ಕತ್ತಿಯಿಂದ ಕಡಿದು ಪರಾರಿಯಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಶರತ್ ಹತ್ಯೆಯಲ್ಲಿ ಸಜೀಪ ನಿವಾಸಿ ಕಲಂದರ್ ನಿಶಾರ್ ನಂದಾವರ ನಿವಾಸಿ ಇಬ್ರಾಹಿಂ ಹಾಗೂ ಮಹಮ್ಮದ್ ಶರೀಫ್ ಅವರು ಪ್ರಮುಖ ಆರೋಪಿಗಳಾಗಿದ್ದರು. ಇವರಲ್ಲಿ ಮಹಮ್ಮದ್ ಶರೀಫ್ ಅವರ ಜೊತೆ ಇವರಿಗೆ ಸಹಾಯ ಮಾಡಿದ 18 ಜನರನ್ನು ಸುದೀರ್ ರೆಡ್ಡಿ ಅವರ ನೇತ್ರತ್ವದಲ್ಲಿ ಬಂಧನ ಮಾಡಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಉಳಿದಂತೆ ಪ್ರಮುಖ ಆರೋಪಿಗಳ ಪೈಕಿ ನಂದಾವರ ನಿವಾಸಿ ಇಬ್ರಾಹಿಂ ವಿದೇಶಕ್ಕೆ ಪರಾರಿಯಾಗಿದ್ದ ಸಜೀಪ ನಿವಾಸಿ ಕಲಂದರ್ ನಿಶಾರ್ ತಲೆಮರೆಸಿಕೊಂಡಿದ್ದ. ತಲೆಮರೆಸಿಕೊಂಡು ತಿರುಗಾಡುತ್ತಿದ್ದ ಕಲಂದರ್ ಕೊನೆಗೂ ನ್ಯಾಯಾಲಯಕ್ಕೆ ಇಂದು ಹಾಜರಾಗಿದ್ದಾನೆ.