Monday, January 20, 2025
ಸುದ್ದಿ

ಸಹೋದರನಿಂದಲೇ ಚೂರಿ ಇರಿತ: ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲೇ ಮೃತಪಟ್ಟ ವ್ಯಕ್ತಿ – ಕಹಳೆ ನ್ಯೂಸ್

ಬೆಳ್ತಂಗಡಿ: ಸಹೋದರನಿಂದಲೇ ಚೂರಿಯಿಂದ ತಿವಿತಕ್ಕೊಳಗಾಗಿರುವ ವ್ಯಕ್ತಿಯೋರ್ವ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಕಾಯರ್ತಡ್ಕ ಗ್ರಾಮದ ನಿವಾಸಿ ಸಂಜೀವ ಮೃತಪಟ್ಟ ವ್ಯಕ್ತಿ. ಫೆ. 26 ರಂದು ಸಂಜೀವ ಮತ್ತು ಅವರ ಸಹೋದರ ಜಾರಪ್ಪ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಪಿ ಜಾರಪ್ಪ ಚೂರಿಯಿಂದ ಸಂಜೀವನ ಬಲಗೆನ್ನೆಯ ಬಳಿಗೆ ತಿವಿದು ಗಾಯಗೊಳಿಸಿದ್ದ. ಈ ಸಂದರ್ಭ ಗಾಯಾಳು ಸಂಜೀವನನ್ನು ಕಾಯರ್ತಡ್ಕ ಖಾಸಗಿ ಕ್ಲಿನಿಕ್‍ನಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಎ.ಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಂಜೀವ ನಿನ್ನೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂಬಂಧ ಧರ್ಮಸ್ಥಳ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರೆಸಿದ್ದಾರೆ.