Sunday, November 24, 2024
ಸುದ್ದಿ

ಹಿಂದುತ್ವ ನಿಷ್ಠರ ಹತ್ಯೆಯ ತನಿಖೆಯನ್ನು ಸಿ.ಬಿ.ಐ.ಗೆ ಹಸ್ತಾಂತರ ಮಾಡಬೇಕು: ಉಪೇಂದ್ರ ಆಚಾರ್ಯ – ಕಹಳೆ ನ್ಯೂಸ್

ಮಂಗಳೂರಿನ ಜಿಲ್ಲಾಧಿಕಾರಿಯ ಕಚೇರಿಯ ಮುಂಭಾಗದಲ್ಲಿ ಹಿಂದೂ ಜನಜಾಗೃತಿ ಸಮಿತಿ ಮತ್ತು ಸಮಸ್ತ ಹಿಂದೂ ಸಂಘಟನೆಗಳ ವತಿಯಿಂದ ರಾಷ್ಟ್ರೀಯ ಹಿಂದೂ ಆಂದೋಲನ ನಡೆಯಿತು.

ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಉಪೇಂದ್ರ ಆಚಾರ್ಯ ಮಾತನಾಡಿ “ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಹಿಂದೂ ಮುಖಂಡರ ಹತ್ಯೆಯ ಷಡ್ಯಂತರದ ಬಗ್ಗೆ ಸಿ.ಬಿ.ಐ ತನಿಖೆಗೆ ನೀಡಬೇಕು. ಹಿಂದೂ ಮುಖಂಡರ ಹತ್ಯೆಯನ್ನು ಮಾಡುವ ಜಿಹಾದಿಗಳ ಮೇಲೆ ಶೀಘ್ರವಾಗಿ ಕಠಿಣ ಕಾನೂನು ಕ್ರಮ ಜರುಗಿಸಬೇಕು.

ಜಾಹೀರಾತು
ಜಾಹೀರಾತು
ಜಾಹೀರಾತು

ಜೆಮ್ ಶೆಡ್ ಪುರದಲ್ಲಿ ಸುರಕ್ಷತೆ ಇಲ್ಲದೆ ಮನೆ ತ್ಯಜಿಸಿ ಹೋದ 400 ಹಿಂದೂಗಳ ರಕ್ಷಣೆಗೆ ಆಗ್ರಹಿಸಿ ಹಿಂದೂಗಳ ಸಂಭಾವ್ಯ ನಿರಾಶ್ರಿತತೆಯನ್ನು ತಡೆಯಲು ಕಾನೂನು ಕ್ರಮ ಜಾರಿಗೊಳಿಸಬೇಕು. ಹಾಗೆಯೇ ಈ ಪ್ರಕರಣದಲ್ಲಿ ತಕ್ಷಣ ಹಸ್ತಕ್ಷೇಪ ಮಾಡಿ ಹಿಂದೂಗಳಿಗೆ ಪೋಲೀಸ್ ರಕ್ಷಣೆಯನ್ನು ನೀಡಬೇಕು.

ಜಾಹೀರಾತು
ಜಾಹೀರಾತು
ಜಾಹೀರಾತು

ಭಯೋತ್ಪಾದನೆ ಚಟುವಟಿಕೆಯಲ್ಲಿ ತೊಡಗಿರುವವರು ಪಿ.ಎಫ್.ಐ ಸಂಘಟನೆಯವರಾಗಿದ್ದು, ಈ ದೇಶದ್ರೋಹಿ ಐಸಿಸ್ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ಪೊಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ನಿಷೇಧಿಸಬೇಕು.

ಈ ಸಂದರ್ಭದಲ್ಲಿ ಮದರಸಾಗಳಿಗೆ ನೀಡುವ ಅನುದಾನವನ್ನು ಭಯೋತ್ಪಾದನೆಗಾಗಿ ಉಪಯೋಗಿಸಲಾಗುತ್ತಿದೆ ಈ ವಿಚಾರದ ಬಗ್ಗೆಯೂ ವಿಚಾರಣೆಯನ್ನು ನಡೆಸಬೇಕು.ಜಾತ್ಯಾತೀತ ಭಾರತದಲ್ಲಿ ಧಾರ್ಮಿಕ ಶಿಕ್ಷಣ ನೀಡುವ ಮದರಸಾಗಳಿಗೆ ಅನುದಾನ ನೀಡುವುದನ್ನು ನಿಲ್ಲಿಸಬೇಕು ” ಎಂದು ತಮ್ಮ ವಿಚಾರ ಮಂಡಿಸಿದರು.

ಈ ವಿಷಯಕ್ಕೆ ಸಂಬಂಧಿಸಿದಂತೆ ಅನಂತ ಶೆಟ್ಟಿ , ಪ್ರೋಟೋಕೋಲ್ ತಹಸಿಯಿಲುದಾರರಿಗೆ ಮನವಿಯನ್ನು ನೀಡಲಾಯಿತು.

ಈ ಸಂಧರ್ಭದಲ್ಲಿ ಶ್ರೀ.ಪ್ರವೀಣ್ ಚಂದ್ರ ಕುಮಾರ್, ಶ್ರೀ.ಸುರೇಶ್ ಕದ್ರಿ,ಶ್ರೀ. ದಯಾನಂದ ವಳಚ್ಚಿಳ್ ,ಶ್ರೀ.ಕೃಷ್ಣ ಫರಂಗಿಪೇಟೆ, ಶ್ರೀ.ವಿಶ್ವನಾಥ ಬೋಂದೇಲ್,ಶ್ರೀ.ದಾಮೋದರ, ಶ್ರೀ. ರಾಜೇಶ್,ಸೌ ವಿದ್ಯಾ ದೇರಳಕಟ್ಟೆ , ನವಪ್ರಭ ಮುಂತಾದ ಹಿಂದೂ ಧರ್ಮಾಭಿಮಾನಿಗಳು ಉಪಸ್ಥಿತಿತರಿದ್ದರು.