Saturday, November 23, 2024
ಸುದ್ದಿ

ವಿವೇಕಾನಂದ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಮನೋರಂಜನೆ – ಕಹಳೆ ನ್ಯೂಸ್

ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವದ ಪ್ರಯುಕ್ತ ಶನಿವಾರ ವಿವಿಧ ಸಾಂಸ್ಕೃತಿಕ ವಿನೋದಾವಳಿಗಳು ನೆರೆದಿದ್ದವರ ಮನಸೂರೆಗೊಂಡಿತು.

ಕಾಲೇಜಿನ ಹಿರಿಯ ವಿದ್ಯಾರ್ಥಿಗಳು, ಕಾಲೇಜಿನ ಉಪನ್ಯಾಸಕರು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸುವ ಮೂಲಕ ತಾವೇನೂ ವಿದ್ಯಾರ್ಥಿಗಳಿಗಿಂತ ಕಡಿಮೆ ಇಲ್ಲ ಎನ್ನುವಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವ ಮೂಲಕ ಶ್ಲಾಘನೆಗೆ ಪಾತ್ರರಾದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹಳೆ ವಿದ್ಯಾರ್ಥಿಗಳು “ಗದಾಯುದ್ಧ” ಯಕ್ಷಗಾನ ಪ್ರಸಂಗವನ್ನು ಪ್ರಸ್ತುತಪಡಿಸಿದರು. ಹಿಮ್ಮೆಳ ಹಾಗೂ ಮುಮ್ಮೇಳ ಎರಡೂ ಒಂದಕ್ಕೊಂದನ್ನು ಮೀರಿಸುವಂತೆ ಪೈಪೋಟಿಯೊಂದಿಗೆ ಸಭಿಕರ ಕರತಾಡನಕ್ಕೆ ಸಾಕ್ಷಿಯಾಯಿತು. ಇನ್ನು ಕೌರವ, ಪಾಂಡವರ ನಡುವಿನ ಕಾದಾಟ ಮನೋಜ್ಞವಾಗಿ ಮೂಡಿಬಂತು.

ಒಂದೊಂದು ಪಾತ್ರಗಳು ಇನ್ನೊಂದು ಪಾತ್ರವನ್ನು ಮೀರಿಸುವಂತೆ ಮಿಂಚಿದರು. ಇಡೀ ಪ್ರಸಂಗದ ಕೇಂದ್ರ ಬಿಂದುವಾದ ಭೀಮ ಹಾಗೂ ದುರ್ಯೋಧನರ ಪಾತ್ರವನ್ನು ಮಾಡಿದವರು ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಲಘುಶಾಸ್ತ್ರೀಯ ನೃತ್ಯ, ಕಿಶೋರ್ ಕುಮಾರ್ ಅವರ ಹಾಡುಗಳನ್ನು ಉಪನ್ಯಾಸಕ ಹಿರಿಯ ವಿದ್ಯಾರ್ಥಿಗಳು ಕಾರ್ಯಕ್ರಮ ನೀಡಿದರು.

ಪ್ರಸಕ್ತ ಸಾಲಿನ ವಿದ್ಯಾರ್ಥಿಗಳು ಭರತನಾಟ್ಯ, ಸಮೂಹ ಗಾಯನ, ಕಥಕ್, ಜನಪದ ವೈವಿಧ್ಯ, ಕೋಲಾಟ, ಲಂಬಾಣಿ, ಫ್ಯೂಷನ್ ಡ್ಯಾನ್ಸ್, ಮೇಘಾಲಯ ನೃತ್ಯ, ಗುಜರಾತಿ ಶೈಲಿ ನೃತ್ಯ, ಪ್ರಹಸನ, ನಾಟಕ, ಯೋಗ ಹೀಗೆ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನೀಡಿ ಸಂಭ್ರಮಿಸಿದರು.