Recent Posts

Sunday, January 19, 2025
ಸುದ್ದಿ

ಕನಕದಾಸರಿಗೆ ಅಪಚಾರ ; ಹೋರಾಡುವವರ ಜತೆ ನಾನೂ ಭಾಗಿ | ಕನಕ ಜಯಂತಿ ಉದ್ಘಾಟಿಸಿ – ಪೇಜಾವರ ಶ್ರೀ

ಉಡುಪಿ : ಪೂರ್ವಾಭಿಮುಖನಾಗಿದ್ದ ಶ್ರೀಕೃಷ್ಣ ಕನಕನ ಭಕ್ತಿ ನೋಡಿ ಪಶ್ಚಿಮಾಭಿಮುಖನಾಗಿರುವುದು ಸತ್ಯ. ಆದರೆ ಆ ಬಗ್ಗೆ ಕೆಲವರು ಅಪ ಚಾರ ಎಸಗು ತ್ತಾರೆ. ಅವರ ವಿರುದ್ಧ ಹೋರಾಟ ನಡೆಸು ವವರ ಜತೆಗೆ ನಾನು ಭಾಗಿ ಯಾಗಲು ಸಿದ್ಧನಿದ್ದೇನೆ ಎಂದು ಪರ್ಯಾಯ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.

 

ಜಾಹೀರಾತು
ಜಾಹೀರಾತು
ಜಾಹೀರಾತು

ಹಾಲುಮತ ಮಹಾಸಭಾದ ಆಶ್ರಯದಲ್ಲಿ ರವಿವಾರ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಕನಕ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀಕೃಷ್ಣ ಮಠದ ಹೊರಗಿರುವ ಕಿಂಡಿಯ ಮೂಲಕ ಕನಕ ಶ್ರೀಕೃಷ್ಣನನ್ನು ನೋಡಿದರೆ, ಒಳ ಗಿರೋದು ಕೃಷ್ಣ ಕನಕನನ್ನು ನೋಡಿ ದರ್ಶನ ಮಾಡಿದ ಕಿಂಡಿ. ಕೃಷ್ಣ ಪಶ್ಚಿಮಕ್ಕೆ ತಿರುಗಿ ದ್ದಾನೆ ಎನ್ನುವುದಕ್ಕೆ ವಾದಿರಾಜರು ಮತ್ತು ವ್ಯಾಸರಾಜರು ಸಾಕ್ಷಿ. ಅವರ ಸ್ತೋತ್ರದಲ್ಲಿಯೂ ಇದರ ಉಲ್ಲೇಖವಿದೆ. ಮಠದ ಒಳಗಿರುವ ಕನಕ ಮೂರ್ತಿಗೆ ಪ್ರತಿದಿನ ಪೂಜೆ ನಡೆಯುತ್ತದೆ. ಶ್ರೀಕೃಷ್ಣ ಯಾವತ್ತಿಗೂ ಹಿಂದುಳಿದ ಭಕ್ತರ ಪರ ವಿರು ತ್ತಾನೆ ಎಂದರು.

ಏಕತೆ ಸಂದೇಶ ನೀಡಿದ ಕನಕದಾಸರು

ಕನಕರು ಬಸವಣ್ಣನಂತೆ ಕ್ರಾಂತಿಕಾರಿಯಾಗಿದ್ದರು. ಹಿಂದುಳಿದ ವರ್ಗದಲ್ಲಿ ಅವತರಿಸಿದ ಕನಕ ದಾಸರು ಇಡೀ ರಾಜ್ಯಕ್ಕೆ ಏಕತಾ ಸಂದೇಶ ನೀಡಿ ದವರು. ಶ್ರೀಕೃಷ್ಣನನ್ನು ತಿರುಗಿಸುವ ಮೂಲಕ ಸಮಾಜದ ಕಣ್ಣು ತೆರೆಸಿದ್ದಾರೆ. ಶ್ರೀಕೃಷ್ಣ ಪೂರ್ವ ದಿಂದ ಪಶ್ಚಿಮಕ್ಕೆ ತಿರುಗಿದ್ದಾನೆ. ಯುವಜನತೆ ಪಾಶ್ಚಾತ್ಯದಿಂದ ನಮ್ಮ ಸಂಸ್ಕೃತಿಯತ್ತ ತಿರುಗಬೇಕು ಎಂದರು.

 

ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಮಾತ ನಾಡಿ, ಯಾವ ಸಮುದಾಯ ತಿರಸ್ಕಾರಕ್ಕೆ ಒಳ ಗಾಗಿ ದೆಯೋ ಇಂದು ಜಾಗೃತವಾಗುತ್ತಿದೆ. ತುಳಿತn ಕ್ಕೊಳಗಾದವರು ದೂರವಾಗುತ್ತಾರೆ ಎಂಬುದನ್ನು ಎಲ್ಲರು ತಿಳಿಯಬೇಕು. ಹಾಲುಮತ ಬಹುದೊಡ್ಡ ಪರಂಪರೆ, ಇತಿಹಾಸ ಹೊಂದಿದೆ. ಆದರೆ ಅದು ಕೈಚೆಲ್ಲಿ ಹೋಗಿದೆ. ಸಮುದಾಯ ರಾಜಕೀಯ, ಸಾಮಾಜಿಕವಾಗಿ ಪ್ರಗತಿ ಕಾಣಬೇಕು. ಆಗ ಮಾತ್ರ ಜಾಗೃತಿಯಾಗಲು ಸಾಧ್ಯ ಎಂದು ಹೇಳಿದರು.

ಹಾಲುಮತ ಮಹಾಸಭಾ ನನ್ನನ್ನು ಉಡುಪಿಗೆ ಬರುವಂತೆ ಮಾಡಿದ್ದು, ಉಡುಪಿ-ಕಾಗಿನೆಲೆಗೆ ಸೇತುವೆಯಾಗಿದೆ. ಪೇಜಾವರ ಶ್ರೀಗಳು ಕನಕನ ವಿಚಾರದ ಕುರಿತಂತೆ ಎಲ್ಲ ಅನುಮಾನಗಳನ್ನು ದೂರ ಮಾಡಿದ್ದಾರೆ ಎಂದರು.

ಬುದ್ಧಿಜೀವಿಗಳಿಂದ ಅಪಚಾರ

ಕೆಲವು ಬುದ್ಧಿಜೀವಿಗಳು ಪ್ರಚಾರಕ್ಕಾಗಿ ಕನಕನಭಕ್ತಿಗೆ ಕೃಷ್ಣ ತಿರುಗಿ ನಿಂತಿಲ್ಲ ಎನ್ನುತ್ತಾರೆ. ಆದರೆ ಕನಕನ ಕಿಂಡಿ ಕನಕನ ಪವಾಡ ಇದೆಲ್ಲ ಇತಿಹಾಸ. ಯಾರೂ ಇದನ್ನು ಬದಲಿಸಲು ಸಾಧ್ಯವಿಲ್ಲ. ಕನಕನ ಕಿಂಡಿಯಿಂದ ಉಡುಪಿಗೂ ಕೀರ್ತಿ ಬಂದಿದೆ ಎಂದು ಕಾಗಿನೆಲೆ ಸ್ವಾಮೀಜಿ ಹೇಳಿದರು.
ಶ್ರೀ ಪೇಜಾವರ ಮಠದ ಕಿರಿಯ ಯತಿ, ಸುವರ್ಣಮುಖೀ ಸಂಸ್ಕೃತಧಾಮದ ಸಂಸ್ಥಾಪಕ ಆಚಾರ್ಯ ಡಾ| ಅಮೆರಿಕ. ನಾಗರಾಜ್‌, ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ, ಮೈಸೂರು ಶಾಸಕ ಎಂ.ಕೆ. ಸೋಮಶೇಖರ, ವಿಶ್ವನಾಥ್‌, ರಾಜಶೇಖರ ಇಟ್ನಾಳ, ಗಾಜಿಗೌಡ್ರು, ಡಾ| ನಾಗಾಲಕ್ಷ್ಮೀ, ಪಳನಿಸ್ವಾಮಿ, ಪುಷೋತ್ತಮ ಮರಿಗೌಡ, ರಾಮಪ್ಪ, ಆರ್‌. ಶಂಕರ್‌ ಉಪಸ್ಥಿತರಿದ್ದರು. ಮಾಲೇಗೌಡ ಪ್ರಸ್ತಾವನೆಗೈದರು. ರುದ್ರಣ್ಣ ಗುಳಗುಳಿ ಸ್ವಾಗತಿಸಿದರು.

Leave a Response