Recent Posts

Sunday, January 19, 2025
ಸುದ್ದಿ

ರಫೇಲ್ ಯುದ್ಧ ವಿಮಾನ ಭಾರತಕ್ಕೆ ವಿಳಂಬವಾಗಿ ಬರಲು ಮೋದಿಯೇ ನೇರಹೊಣೆ; ರಾಹುಲ್ ಗಾಂಧಿ – ಕಹಳೆ ನ್ಯೂಸ್

ಹೊಸದಿಲ್ಲಿ: ರಫೇಲ್ ಯುದ್ಧ ವಿಮಾನ ಭಾರತಕ್ಕೆ ಬರುವುದು ವಿಳಂಬವಾಗಲು ಪ್ರಧಾನಿ ಮೋದಿಯವರೇ ನೇರಹೊಣೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ಗಾಂಧಿ ಟೀಕಿಸಿದ್ದಾರೆ.

ಮೋದಿಯವರ ನಕಲಿ ಶೌರ್ಯಪ್ರದರ್ಶನ ಮತ್ತು ಆತ್ಮಶ್ಲಾಘನೆಯ ಸುಳ್ಳುಗಳಿಗೆ ಈ ದೇಶ ಸಾಕ್ಷಿಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ಮಾನ್ಯ ಪ್ರಧಾನಿಗಳೇ, ಈ ಬಗ್ಗೆ ನಿಮಗೆ ನಾಚಿಕೆಯಾಗುವುದಿಲ್ಲವೇ ? ನೀವು ೩೦ ಸಾವಿರ ಕೋಟಿ ರೂಪಾಯಿ ಕದ್ದು, ಸ್ನೇಹಿತ ಅನಿಲ್‌ಗೆ ನೀಡಿದ್ದೀರಿ. ಭಾರತಕ್ಕೆ ರಫೇಲ್ ಯುದ್ಧವಿಮಾನಗಳು ಬರುವುದು ವಿಳಂಬವಾಗಲು ನೀವೇ ಹೊಣೆ” ಎಂದು ರಾಹುಲ್ ಟೀಕಾಪ್ರಹಾರ ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಂಗ್ ಕಮಾಂಡರ್ ಅಭಿನಂದರ್ ಅವರಂಥ ಸಾಹಸಿ ಪೈಲಟ್‌ಗಳು ತಮ್ಮ ಜೀವವನ್ನು ಪಣಕ್ಕಿಟ್ಟು, ಏಕೆ ಹಳೆಯ ವಿಮಾನಗಳನ್ನು ಓಡಿಸಬೇಕು” ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು