Recent Posts

Monday, January 20, 2025
ಸುದ್ದಿ

ತಲೆ ಮರೆಸಿಕೊಂಡಿಕೊಂಡಿದ್ದ ಆರೋಪಿಯ ಬಂಧನ – ಕಹಳೆ ನ್ಯೂಸ್

ಮಂಗಳೂರು : ಕಂಕನಾಡಿ ನಗರ ಪೊಲೀಸ್ ಠಾಣಾ ಪ್ರಕರಣವೊಂದಲ್ಲಿ ಬೇಕಾಗಿದ್ದ ಆರೋಪಿ ಗಿರೀಶ್.ಪಿ.ಕೋಟ್ಯಾನ್ ಎಂಬಾತನನ್ನು ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ನೇತೃತ್ವದ ರೌಡಿ ನಿಗ್ರಹ ದಳ ಸಿಬ್ಬಂದಿಯವರು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ದಸ್ತಗಿರಿಯಾದ ಆರೋಪಿ ಮಂಗಳೂರು, ಕದ್ರಿ ಹಿಲ್ಸ್ ಶ್ರೀ ನಿಧಿ, ಕದ್ರಿ ಪಾದೆಯ ನಿವಾಸಿ, ಗಿರೀಶ್.ಪಿ.ಕೋಟ್ಯಾನ್. ಈತನ ಮೇಲೆ ಕಂಕನಾಡಿ ನಗರ ಠಾಣೆಯಲ್ಲಿ ಸುಮಾರು ಒಂದು ತಿಂಗಳ ಹಿಂದೆ ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಾದ ನಂತರ ಪೊಲೀಸರಿಗೆ ಸಿಗದೇ ತಲೆ ಮರೆಸಿಕೊಂಡಿದ್ದು, ಆರೋಪಿಯನ್ನು ಈ ದಿನ ದಸ್ತಗಿರಿ ಮಾಡಿ ಮುಂದಿನ ಕ್ರಮದ ಬಗ್ಗೆ ಈತನನ್ನು ಕಂಕನಾಡಿ ನಗರ ಪೊಲೀಸ್ ಠಾಣೆಗೆ ಹಸ್ತಾಂತರಿಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು