ಪುತ್ತೂರು: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ , ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ , ಸಾರ್ವಜನಿಕ ಶಿಕ್ಷಣ ಇಲಾಖೆಗಳ ಸಹಯೋಗದಲ್ಲಿ ವಿಜ್ಞಾನ ದಿನಾಚರಣೆ ಪ್ರಯುಕ್ತ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ‘ಸರ್ ಸಿ ವಿ ರಾಮನ್ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಒಂಬತ್ತನೆಯ ತರಗತಿ ವಿದ್ಯಾರ್ಥಿಗಳಾದ ರಾಕೇಶ್ ಕೃಷ್ಣ ಹಾಗೂ ವಿಶಾಖ್ ಕಾಮತ್ ತಂಡ ದ್ವಿತೀಯ ಸ್ಥಾನ ಪಡೆದಿದೆ.
ಈ ಸ್ಪರ್ಧೆಯ ಪ್ರಸಾರವು ಚಂದನ ವಾಹಿನಿಯ ‘ಥಟ್ ಅಂತ ಹೇಳಿ’ ಕಾರ್ಯಕ್ರಮದಲ್ಲಿ ಮಾಚ್ 4, 11, 19 ಮತ್ತು 21ರಂದು ರಾತ್ರಿ 9.30 ಗಂಟೆಗೆ ಪ್ರಸಾರಗೊಳ್ಳಲಿದೆ.
ರಾಕೇಶ್ ಕೃಷ್ಣ ನೆಕ್ಕಿಲ ನಿವಾಸಿ ರವಿಶಂಕರ್ ಹಾಗೂ ಡಾ.ದುರ್ಗಾರತ್ನ ದಂಪತಿ ಪುತ್ರನಾದರೆ ವಿಶಾಕ್ ಕಾಮತ್ ವಿದ್ಯಾಧರ ಕಾಮತ್ ಹಾಗೂ ಮುಕ್ತಾ ಕಾಮತ್ ದಂಪತಿ ಪುತ್ರ.