Sunday, November 24, 2024
ಸುದ್ದಿ

ಉಪ್ಪಿನಂಗಡಿ ‘ವಿಜಯ-ವಿಕ್ರಮ’ ಜೋಡುಕರೆ ಕಂಬಳ ಕೂಟದ ಫಲಿತಾಂಶ – ಕಹಳೆ ನ್ಯೂಸ್

ಉಪ್ಪಿನಂಗಡಿ: ಕಂಬಳ ಕರಾವಳಿ ಕರ್ನಾಟಕದ ಒಂದು ಜಾನಪದ ಕ್ರೀಡೆ. ದಷ್ಟ ಪುಷ್ಟವಾಗಿ ಬೆಳೆಸಿದ ಕೋಣಗಳನ್ನು ಹಸನಾಗಿ ಹದ ಮಾಡಿದ ಮಣ್ಣಿನಲ್ಲಿ ಒಡಿಸುವ ಸ್ಪರ್ಧೆಯೇ ಕಂಬಳ.

ಹಿಂದಿನ ಅರಸು ಕಾಲದಿಂದ ಹಿಡಿದು ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಯಲ್ಲಿ ಕೂಡ ಕಂಬಳ ಕೃಷಿ ಪರಂಪರೆಯ ಅವಿಭಾಜ್ಯ ಅಂಗವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರ ನೇತೃತ್ವದಲ್ಲಿ ನಡೆದ 34 ನೇ ವರ್ಷದ ಉಪ್ಪಿನಂಗಡಿ ‘ವಿಜಯ-ವಿಕ್ರಮ’ ಜೋಡುಕರೆ ಕಂಬಳ ಕೂಟವು ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದಲ್ಲಿ ಉಪ್ಪಿನಂಗಡಿಯ ಕೂಟೇಲು ನೇತ್ರಾವತಿ ನದಿಯಲ್ಲಿ ಬಹಳ ಅದ್ಧೂರಿಯಾಗಿ ಯಶಸ್ವಿಯಾಗಿ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಂಬಳ ಕೂಟದ ಫಲಿತಾಂಶ ಈಗಾಗಲೇ ಹೊರಬಿದ್ದಿದ್ದು ಅವು ಈ ಕೆಳಗಿನಂತಿವೆ.
ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ,

ಕನೆಹಲಗೆ: ೪ ಜೊತೆ
ಅಡ್ಡಹಲಗೆ: ೫ ಜೊತೆ
ಹಗ್ಗ ಹಿರಿಯ: ೧೨ ಜೊತೆ
ನೇಗಿಲು ಹಿರಿಯ: ೨೦ ಜೊತೆ
ಹಗ್ಗ ಕಿರಿಯ: ೬೬ ಜೊತೆ
ಒಟ್ಟು ಕೋಣಗಳ ಸಂಖ್ಯೆ: ೧೨೩ ಜೊತೆ
==================
ಕನೆಹಲಗೆ
ಪ್ರಥಮ: ಬೇಲಾಡಿ ಬಾವ ಅಶೋಕ್ ಶೆಟ್ಟಿ
ಓಡಿಸಿದವರು: ನಾರಾವಿ ಯುವರಾಜ ಜೈನ್
(೬.೫ ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ)

ದ್ವಿತೀಯ: ವಾಮಂಜೂರು ಶಾಂತಾರಾಮ ಶೆಟ್ಟಿ
ಓಡಿಸಿದವರು: ಮಂದಾರ್ತಿ ಶಿರೂರು ಮುದ್ದುಮನೆ ಗೋಪಾಲ ನಾಯ್ಕ
(೬.೫ ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ)
====================
ಹಗ್ಗ ಹಿರಿಯ
ಪ್ರಥಮ: ಮಾಳ ಆನಂದ ನಿಲಯ ಶೇಖರ ‘ಎ’ ಶೆಟ್ಟಿ
ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೆÃರಿ ಸುರೇಶ್ ಎಮ್ ಶೆಟ್ಟಿ
ದ್ವಿತೀಯ: ಕೂಳೂರು ಪೊಯ್ಯೆಲು ಪಿಆರ್ ಶೆಟ್ಟಿ ‘ಎ”
ಓಡಿಸಿದವರು: ಬಜಗೋಳಿ ಜೋಗಿಬೆಟ್ಟು ನಿಶಾಂತ್ ಶೆಟ್ಟಿ
===================
ಹಗ್ಗ ಕಿರಿಯ
ಪ್ರಥಮ: ಹೊಸಬೆಟ್ಟು ಏರಿಮಾರು ಬರ್ಕೆ ಚಂದ್ರಹಾಸ ಸಾಧು ಸನಿಲ್
ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ್
ದ್ವಿತೀಯ: ಮಿಜಾರ್ ಪ್ರಸಾದ್ ನಿಲಯ ಪ್ರಸಿದ್ಧ ಶಕ್ತಿಪ್ರಸಾದ್ ಶೆಟ್ಟಿ
ಓಡಿಸಿದವರು: ನತೀಶ್ ಬಾರಾಡಿ
=====================
ನೇಗಿಲು ಹಿರಿಯ
ಪ್ರಥಮ: ಕೃಷ್ಣಾಪುರ ನಡುಮನೆ ಪರಮೆಶ್ವರ ಸಾಲ್ಯಾನ್ ‘ಬಿ’
ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ್
ದ್ವಿತೀಯ: ಬೋಳದ ಗುತ್ತು ಜಗದೀಶ್ ಶೆಟ್ಟಿ ‘ಎ’
ಓಡಿಸಿದವರು: ಹೊಕ್ಕಾಡಿಗೋಳಿ ಹಕ್ಕೆÃರಿ ಸುರೇಶ್ ಎಮ್ ಶೆಟ್ಟಿ
================
ನೇಗಿಲು ಕಿರಿಯ
ಪ್ರಥಮ: ಮಿಜಾರ್ ಪ್ರಸಾದ್ ನಿಲಯ ಪ್ರಸಿದ್ಧ ಶಕ್ತಿ ಪ್ರಸಾದ್ ಶೆಟ್ಟಿ
ಓಡಿಸಿದವರು: ಮಿಜಾರು ಅಶ್ವತಪುರ ಶ್ರೀನಿವಾಸ ಗೌಡ
ದ್ವಿತೀಯ: ಬೆಳುವಾಯಿ ಸ್ನೇಹ ಸದನ ಲಕ್ಷಿ್ಮೀ ವಿನಯ್ ಕುಮಾರ್
ಓಡಿಸಿದವರು: ಅಳದಂಗಡಿ ರವಿಕುಮಾರ್
===============
ಅಟ್ಟ ಹಲಗೆ
ಪ್ರಥಮ: ವೋರ್ಲ ಗಿರೀಶ್ ಆಳ್ವ
ಓಡಿಸಿದವರು: ಬಂಗಾಡಿ ಕುದ್ಮನ್ ಲೋಕಯ್ಯ ಗೌಡ
ದ್ವಿತೀಯ: ಮೇರಮಜಲ್ ಮಿಷನ್ ಗೋಡ್ವಿನ್ ವೆಲ್ವಿನ್ ವಾಸ್ ‘ಎ’
ಓಡಿಸಿದವರು: ಸಾವ್ಯ ಗಂಗಯ್ಯ ಪೂಜಾರಿ
==================
ಒಟ್ಟಿನಲ್ಲಿ ಈ ಬಾರಿಯ ಉಪ್ಪಿನಂಗಡಿ ‘ವಿಜಯ-ವಿಕ್ರಮ’ ಜೋಡುಕರೆ ಕಂಬಳವು ಯಶಸ್ವಿಯಾಗಿ ಮೂಡಿಬಂದಿರುವುದರಲ್ಲಿ ಎರಡು ಮಾತಿಲ್ಲ.