ಶಿವರಾತ್ರಿ ಹಬ್ಬದ ದಿನದಂದು ಮನೆಯೊಂದರಲ್ಲಿ 6 ಅಡಿ ಉದ್ದದ ನಾಗರಹಾವು ಕಾಣಿಸಿಕೊಂಡಿದ್ದು, ಇದರಿಂದ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬನಹಳ್ಳಿಯಲ್ಲಿ ನಡೆದಿದೆ.
ಗ್ರಾಮದ ಮನೆಯೊಂದರಲ್ಲಿ ನಾಗರಹಾವು ಕಾಣಿಸಿಕೊಂಡಿದ್ದು ಅದನ್ನು ನೋಡುತ್ತಲೇ ಗಾಬರಿಗೊಂಡ ಮನೆಯವರು ಹೊರಗೆ ಓಡಿ ಬಂದಿದ್ದಾರೆ. ಕೆಲ ಸಮಯದ ಬಳಿಕ ಮನೆಯಿಂದ ಹೊರ ಬಂದ ಹಾವು ಬಿಲ ಸೇರಿಕೊಂಡಿದೆ.
ಬಳಿಕ ಉರಗ ತಜ್ಞ ಸ್ನೇಕ್ ಕಾರ್ತಿಕ್ ಎಂಬವರಿಗೆ ಗ್ರಾಮಸ್ಥರು ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಅವರು ಹಾವನ್ನು ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ. ನಂತರ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.