Monday, January 20, 2025
ಸುದ್ದಿ

ಬಜರಂಗದಳ ಕರ್ನಾಟಕದ ದಕ್ಷಿಣ ಪ್ರಾಂತ ಇದರ 2 ದಿನಗಳ ಪ್ರಾಂತ ಬೈಠಕ್ – ಕಹಳೆ ನ್ಯೂಸ್

ಬಜರಂಗದಳ ಕರ್ನಾಟಕದ ದಕ್ಷಿಣ ಪ್ರಾಂತ ಇದರ 2 ದಿನಗಳ ಪ್ರಾಂತ ಬೈಠಕ್ ದಿನಾಂಕ 2 ಮತ್ತು 3 ರಂದು ಕಡಬದ ಶ್ರೀ ಮಹಾಗಣಪತಿ ಲಕ್ಷ್ಮೀಜನಾರ್ಧನ, ಪಂಚಮುಖಿ ಆಂಜನೇಯ ಸ್ವಾಮಿ ದೇವಸ್ಥಾನ ಕೇಪು ಇಲ್ಲಿ ನಡೆಯಿತು.

ಕರ್ನಾಟಕ ದಕ್ಷಿಣ ಪ್ರಾಂತದ ಎಲ್ಲಾ ಜಿಲ್ಲೆಯ ಜವಾಬ್ದಾರಿಯುತ ಕಾರ್ಯಕರ್ತರು 2 ದಿನಗಳ ಇ ಬೈಠಕ್ ನಲ್ಲಿ ಭಾಗವಹಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

3 ಮಾರ್ಚ್ ರಂದು ನಡೆದ ಸಮಾರೋಪ ಸಮಾರಂಭದಲ್ಲಿ ವಿಶ್ವ ಹಿಂದೂ ಪರಿಷತ್ ನ ಕರ್ನಾಟಕ ದಕ್ಷಿಣ ಪ್ರಾಂತ ಇದರ ಕಾರ್ಯದರ್ಶಿ ಜಗನ್ನಾಥ ಶಾಸ್ತ್ರಿ ಇವರು ಸಮಾರೋಪ ಭಾಷಣ ಮಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬಜರಂಗದಳದ ಪ್ರಾಂತ ಸಂಯೋಜಕ್ ಸುನೀಲ್ ಕೆ.ಅರ್ ಕಾರ್ಯಕರ್ತರಿಗೆ ಮುಂದಿನ ದಿನಗಳ ಹೋರಾಟ, ಸಂಘಟನಾತ್ಮಕ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.

ಈ ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಬಜರಂಗದಳದ ಪ್ರಾಂತ ಸಹ ಸಂಯೋಜಕ್ ಮುರಳಿ ಕೃಷ್ಣ ಹಸಂತ್ತಡ್ಕ.ಪ್ರಾಂತ ಸಹ ಸಂಯೋಜಕ್ ರಘು ಸಕಲೇಶಪುರ, ಮಾಜಿ ಸೈನಿಕರಾದ ಗಂಗಾಧರ ಗೌಡ ಹಳ್ಳಿಮನೆ.ಉದ್ಯಮಿ ಮನಮೋಹನ್ ರೈ ಉಪಸ್ಥಿತರಿದ್ದರು.