Saturday, November 23, 2024
ಸುದ್ದಿ

‘ಏಟಿಗೆ ಎದುರೇಟು ನನ್ನ ಸ್ವಭಾವ: ಉಗ್ರರು ಪಾತಾಳದಲ್ಲಿದ್ದರೂ ಹುಡುಕಿ ಹೊಡೆಯುತ್ತೇವೆ – ಕಹಳೆ ನ್ಯೂಸ್

ಅಹಮದಾಬಾದ್: ಭಯೋತ್ಪಾದಕರ ದಮನಕ್ಕೆ ದೃಢ ಸಂಕಲ್ಪ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಉಗ್ರರು ಎಲ್ಲೇ ಅಡಗಿದ್ದರೂ ಹುಟ್ಟಡಗಿಸದೇ ಬಿಡುವುದಿಲ್ಲ ಎಂದು ಗುಡುಗಿದ್ದಾರೆ.

ಅಹಮದಾಬಾದ್‍ನಲ್ಲಿ 1,450 ಕೋಟಿ ರೂ ವೆಚ್ಚದಲ್ಲಿ ವಿಸ್ತರಿಸಲಾದ ಏಷ್ಯಾದಲ್ಲೇ ಅತಿ ದೊಡ್ಡದು ಎಂಬ ಖ್ಯಾತಿಯ 1,200 ಹಾಸಿಗೆಗಳ ಸರ್ಕಾರಿ ಆಸ್ಪತ್ರೆ ಮೆಡಿಸಿಟಿ ಉದ್ಘಾಟಿಸಿ ಮೋದಿ ಮಾತನಾಡಿದರು. ಒಂದೊಂದು ಏಟಿಗೂ ತಿರುಗೇಟು ಕೊಡುವುದು ನನ್ನ ಜಾಯಮಾನ.

ಜಾಹೀರಾತು
ಜಾಹೀರಾತು
ಜಾಹೀರಾತು

ಉಗ್ರರು ಏಳನೇ ಪಾತಾಳದಲ್ಲೇ ಅಡಗಿರಲಿ ಅವರನ್ನು ಹುಡುಕಿ ಹೊರಗೆಳೆದು ಹೊಡೆದು ಹಾಕುತ್ತೇನೆ ಎಂದು ಘರ್ಜಿಸಿದ್ದಾರೆ.ವೈರಿಗಳನ್ನ ಅವರದ್ದೇ ನೆಲದಲ್ಲಿ ಹೊಡೆಯುವುದು ನಮ್ಮ ನೀತಿ. ಹೆಚ್ಚು ಕಾಲ ನಾನು ತಾಳ್ಮೆಯಿಂದ ಇರಲು ಇಷ್ಟಪಡುವುದಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ನಮ್ಮ ಸೇನೆ ನೀಡುವ ಸಲಹೆಗಳನ್ನು ತಾನು ಪಾಲಿಸುತ್ತೇನೆ ಎಂದು ಮೋದಿ ಹೇಳಿದರು. ಪುಲ್ವಾಮಾ ಉಗ್ರ ದಾಳಿ ಬಳಿಕ ಭಾರತೀಯ ವಾಯುಸೇನೆ ಪಾಕಿಸ್ತಾನದ ಬಾಲಾಕೋಟ್‍ಗೆ ನುಗ್ಗಿ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಕ್ಯಾಂಪ್ ಮೇಲೆ ಬಾಂಬ್ ದಾಳಿ ನಡೆಸಿತ್ತು.

ಇದು ಜಗತ್ತಿನ ಮಟ್ಟಿಗೆ ಭಾರತದ ತಾಕತ್ತು ಏನೆಂದು ಪರಿಚಯವಾಗಿದೆ ಎಂದು ಮೋದಿ ಹೆಮ್ಮೆಯಿಂದ ಹೇಳಿಕೊಂಡರು. ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ವೈಮಾನಿಕ ದಾಳಿ ಕುರಿತು ರಾಜಕೀಯ ಕೆಸರೆರಚಾಟದ ನಡುವೆ ಪುಲ್ವಾಮಾ ದಾಳಿಗೆ ಪ್ರತೀಕಾರ ಚುನಾವಣೆ ಗಿಮಿಕ್ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಪ್ರಧಾನಿ ನರೇಂದ್ರ ಮೋದಿ ತೀಕ್ಷ ತಿರುಗೇಟು ನೀಡಿದ್ದಾರೆ.

ಉಗ್ರರ ಮೇಲೆ ವೈಮಾನಿಕ ದಾಳಿ ನಡೆಸಿದ್ದು ಚುನಾವಣೆ ಲಾಭಕ್ಕಾಗಿ ಎಂದು ಅವರು ಆರೋಪಿಸುತ್ತಾರೆ. ನಾವು ಸರ್ಜಿಕಲ್ ದಾಳಿ ನಡೆದಾಗ ಯಾವ ಚುನಾವಣೆಯಿತ್ತು ಎಂದು ಪ್ರಶ್ನಿಸಿದರು.