Sunday, January 19, 2025
ಸುದ್ದಿ

ಮಂಗಳೂರಿನಲ್ಲಿ ‘ಸಾರ್ವಜನಿಕ ಜನಸಂವಾದ ಸಭೆ ಸಂಪನ್ನ | ಎಡಪಂಥೀಯರ ನಿಜಸ್ವರೂಪ ಬಯಲು, ಹಿಂದೂಗಳ ಟಾರ್ಗೆಟ್ ನಿಲ್ಲಿಸಿ ; ಗಣ್ಯರ ಅಭಿಮತ.

ಮಂಗಳೂರು : ಎಡಪಂಥೀಯ ವಿಚಾರವಾದಿಗಳ ಹತ್ಯೆ ಪ್ರಕರಣದಲ್ಲಿ ಬಲಪಂಥೀಯ ಹಿಂದೂ ಸಂಘಟನೆಗಳನ್ನು ವಿನಾಕಾರಣ ಸಿಲುಕಿಸುವ ಷಡ್ಯಂತ್ರವನ್ನು ಸಮಾಜದ ಮುಂದೆ ಪ್ರಸ್ತುತಪಡಿಸಲು ಹಾಗೂ ಎಡಪಂಥೀಯರ ನಿಜವಾದ ಮುಖವಾಡವನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಮಹಾನಗರದ ವಿ.ಟಿ ರೋಡ್ ನಲ್ಲಿರುವ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಸಾಯಂಕಾಲ ಸಾರ್ವಜನಿಕ ಜನಸಂವಾದ ಸಭೆ ಆಯೋಜಿಸಲಾಗಿತ್ತು ಕಾರ್ಯಕ್ರಮದ ಉದ್ಘಾಟನೆಯನ್ನು ದೀಪಪ್ರಜ್ವಲನೆಯ ಮೂಲಕ ಮಾಡಲಾಯಿತು. ಕರ್ನಾಟಕ ರಾಜ್ಯ ಯುವ ಬ್ರಿಗೇಡ್‌ನ ಸಂಯೋಜಕರಾದ ಚಕ್ರವರ್ತಿ ಸೂಲಿಬೆಲೆ ಇವರು ದೀಪಪ್ರಜ್ವಲನೆ ಮಾಡಿದರು. ಬೆಳ್ತಂಗಡಿಯ ನ್ಯಾಯವಾದಿಗಳಾದ ಸುಬ್ರಹ್ಮಣ್ಯ ಅಗರ್ತ, ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಗುರುಪ್ರಸಾದ ಗೌಡ ಉಪಸ್ಥಿತರಿದ್ದರು. ಶಂಖನಾದವನ್ನು ಹಿಂದೂ ಜನಜಾಗೃತಿ ಸಮಿತಿಯ ಬಾಲಕೃಷ್ಣ ಶೆಟ್ಟಿ ಇವರು ಮಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಯುವ ಬ್ರಿಗೇಡ್‌ನ ಸಂಯೋಜಕರಾದ ಚಕ್ರವರ್ತಿ ಸೂಲಿಬೆಲೆಯವರು ಮಾತನಾಡುತ್ತಾ, ದೇಶದಲ್ಲಿ ಇಲ್ಲಿವರೆಗೆ ಆದ ಬುದ್ಧಿಜೀವಿಗಳ ಹತ್ಯೆಯ ಆರೋಪಿಗಳನ್ನು ಪತ್ತೆಹಚ್ಚಲು ಇನ್ನೂ ಯಾಕೆ ಸಾಧ್ಯವಾಗುತ್ತಿಲ್ಲ ಎಂಬುದೇ ನಮ್ಮ ಪ್ರಶ್ನೆಯಾಗಿದೆ, ಪತ್ರಕರ್ತೆ ಗೌರಿ ಲಂಕೇಶ್ ರವರ ಹತ್ಯೆ ಪ್ರಕರಣದಲ್ಲಿ ಸನಾತನ ಸಂಸ್ಥೆ, ಇತರ ಹಿಂದುತ್ವನಿಷ್ಠ ಸಂಘಟನೆಗಳ ಕೈವಾಡ ಇದೆ ಎಂದು ಆಧಾರ ರಹಿತವಾಗಿ ತಲೆಬುಡ ಇಲ್ಲದ ಹೇಳಿಕೆಗಳನ್ನು ಎಸ್ ಐ ಟಿ ಸೇರಿದಂತೆ ರಾಜ್ಯ ಸರಕಾರದ ಕೆಲವು ಮಂತ್ರಿಗಳು ನೀಡುತ್ತಿದ್ದಾರೆ. ದೇಶದಲ್ಲಿ ಹಿಂದುತ್ವವನ್ನು ನಾಶ ಮಾಡಲು ಮೂರು ಶಕ್ತಿಗಳು ಪ್ರಯತ್ನವನ್ನು ಮಾಡುತ್ತಿದ್ದಾರೆ ಅವರೆಂದರೆ, ಕ್ರೈಸ್ತರು, ಜಿಹಾದಿ ಮುಸಲ್ಮಾನರು ಹಾಗೂ ಇತ್ತೀಚೆಗೆ ಈ ವಿಚಾರವಾದಿಗಳು, ಒಟ್ಟಿಗೆ ಸೇರಿಕೊಂಡು ನಮ್ಮ ಹಿಂದೂ ಧರ್ಮದ ಮೇಲೆ ಭೀಕರವಾದ ಹಾನಿಯನ್ನು ಮಾಡುತ್ತಿದ್ದಾರೆ. ಹಲವು ಎನ್.ಜಿ.ಓ ಗಳಿಗೆ ಎಡಪಂಥೀಯರ ಜೊತೆ ಸಂಪರ್ಕ ಇದೆ, ಹಾಗೂ ಎನ್.ಜಿ.ಓ ಗಳಿಗೆ ವಿದೇಶಗಳಿಂದ ಹಣ (ಫಂಡಿಗ್) ಬರುತ್ತಿದೆ. ಎಡಪಂಥೀಯರಿಗೆ ನೀಡಲಾಗುವ ಗುರಿ ಎಂದರೆ ಹಿಂದೂ ಧರ್ಮವನ್ನು ತುಚ್ಚೀಕರಿಸುವುದಾಗಿದೆ. ಹಾಗಾಗಿ ಅವರು ಹಿಂದೂ ಧರ್ಮವನ್ನು ವಿರೋಧಿಸುತ್ತಾರೆ. ಮತಾಂತರಕ್ಕೆ ಅವರ ವಿರೋಧವಿಲ್ಲ ಆದರೆ ಮತಾಂತರವನ್ನು ವಿರೋಧಿಸುವವರನ್ನು ಅವರು ವಿರೋಧಿಸುತ್ತಾರೆ. ಹಾಗೆಯೇ ಜಿಹಾದಿಗಳು ಎಲ್ಲಿಯಾದರು ಭಯೋತ್ಪಾನೆಯ ಚಟುವಟಿಕೆ ಮಾಡಿದಾಗ ಎಡಪಂಥೀಯರು ಅವರಿಗೆ ಬೆಂಗಾವಲಾಗಿ ಸಹಾಯ ಮಾಡುತ್ತಾರೆ, ಸಮಾಜ ಹಾಗು ರಾಷ್ಟ್ರಕ್ಕಾಗಿ ಸನಾತನ ಸಂಸ್ಥೆ ಮಾಡುತ್ತಿರುವ ಉತ್ತಮ ಕೆಲಸಗಳನ್ನು ಸಹಿಸಲಾಗದವರು ಸನಾತನ ಸಂಸ್ಥೆಯನ್ನು ಬಲಿಪಶು ಮಾಡಲು ಪ್ರಯತ್ನಿಸುತ್ತಿದ್ದಾರೆ, ಆದರೆ ಇದರ ಹೊರತಾಗಿಯೂ ಸಂಸ್ಥೆಯು ತನ್ನ ಕಾರ್ಯವನ್ನು ಇನ್ನೂ ಉತ್ತಮ ರೀತಿಯಲ್ಲಿ ಮಾಡುತ್ತಿದೆ. ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮೂಡಬಿದ್ರೆ ಶ್ರೀ ಕ್ಷೇತ್ರ ಕರಿಂಜೆಯ ಶ್ರೀ ಶಕ್ತಿ ಪೀಠದ ಶ್ರೀ ಶ್ರೀ ಶ್ರೀ ಮುಕ್ತಾನಂದ ಸ್ವಾಮೀಜಿಯವರು ಆಶೀರ್ವಚನ ನೀಡುತ್ತಾ, ಪರಾತ್ಪರ ಗುರುಗಳಾದ ಪ.ಪೂ ಡಾ ಜಯಂತ ಬಾಳಾಜಿ ಆಠವಲೆಯವರ ಶ್ರೇಷ್ಟವಾದ ಮಾರ್ಗದರ್ಶನದಲ್ಲಿ ಸನಾತನ ಸಂಸ್ಥೆಯ ಧರ್ಮ ಹಾಗೂ ಆಧ್ಯಾತ್ಮ ಪ್ರಸಾರದ ಕಾರ್ಯವು ಯಾವುದೇ ಅಡಚಣೆಯಿಲ್ಲದೇ ನಡೆಯುತ್ತಿದೆ, ಇಡೀ ಸಮಾಜಕ್ಕೆ ಧರ್ಮಶಿಕ್ಷಣವನ್ನು ನೀಡಿ ಹಿಂದೂ ಧರ್ಮದ ರಕ್ಷಣೆಯನ್ನು ಮಾಡುವ ಅತ್ಯಂತ ಶ್ರೇಯಸ್ಕರವಾದ ಕಾರ್ಯವನ್ನು ಸನಾತನ ಸಂಸ್ಥೆಯು ಮಾಡುತ್ತಿರುವಾಗ ಯಾವುದೋ ಎಡಪಂಥೀಯ ವ್ಯಕ್ತಿಯ ಹತ್ಯೆಯಾದಾಗ ಅದರ ಆರೋಪವನ್ನು ಸಂಸ್ಥೆಯ ಮೇಲೆ ಹಾಕುವಂತಹ ಷಡ್ಯಂತ್ರ ನಡೆಯುತ್ತಿದೆ. ಬಲಪಂಥಿಯ ಹಿಂದೂ ಸಂಘಟನೆಗಳ ಮೇಲೆ ಯಾವುದೇ ಆಧಾರ ಇಲ್ಲದಿದ್ದರು ಸಹ ಆರೋಪವನ್ನು ಮಾಡಲಾಗುತ್ತಿದೆ. ಆದರೆ ಸನಾತನ ಸಂಸ್ಥೆಯನ್ನು ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಯಾಕೆಂದರೆ ಅದರ ಹಿಂದೆ ಭಗವಾನ್ ಶ್ರೀಕೃಷ್ಣ ನ ಕೃಪಾಶೀರ್ವಾದ ಇದೆ. ಎಂದರು.

ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಗುರುಪ್ರಸಾದ ಗೌಡ ಮಾತನಾಡುತ್ತಾ, ಪತ್ರಕರ್ತೆ ಗೌರಿ ಲಂಕೇಶರವರ ಹತ್ಯೆಯ ನಂತರದ ವಿದ್ಯಮಾನಗಳನ್ನು ಗಮನಿಸಿದಾಗ ಎಡಪಂಥೀಯರು ಹತ್ಯೆಯನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವುದು ಎದ್ದು ಕಾಣುತ್ತಿದೆ. ರಾಜ್ಯ ಸರಕಾರ ನೇಮಿಸಿದ ವಿಶೇಷ ತನಿಖಾ ದಳ ತನಿಖೆ ನಡೆಸುತ್ತಿದೆ, ಹಿಂದುತ್ವವಾದಿಗಳ ಸಂದರ್ಭದಲ್ಲಿ ಯಾವುದೇ ಪುರಾವೆ ಸಿಗದಿರುವಾಗಲೂ ಎಡಪಂಥೀಯರು ಹತ್ಯೆಯ ಆರೋಪವನ್ನು ಹಿಂದೂ ಸಂಘಟನೆಗಳ ಮೇಲೆ ಹಾಕುತ್ತಿದ್ದಾರೆ. ಎಡಪಂಥೀಯರು ರಾಜ್ಯ ಸರಕಾರದ ವೈಪಲ್ಯದ ಬಗ್ಗೆ ಪ್ರಶ್ನಿಸದೇ, ಕೇಂದ್ರ ಸರಕಾರವನ್ನು ಪ್ರಶ್ನಿಸುತ್ತಿದ್ದಾರೆ. ಅವರಿಗೆ ನಕ್ಸಲರ ಜೊತೆಗೆ ಇರುವ ಆಯಾಮವನ್ನು ದುರ್ಲಕ್ಷಿಸಲಾಗುತ್ತಿದೆ. ಒಟ್ಟಾರೆ ತನಿಖಾ ಸಂಸ್ಥೆಯ ತನಿಖೆಯ ದಿಶೆಯನ್ನು ಬದಲಿಸುವುದು ಮತ್ತು ಹಿಂದೂ ಸಂಘಟನೆಗಳ ತೇಜೊವಧೆಯನ್ನು ಮಾಡುತ್ತಿರುವುದು ಗಮನಕ್ಕೆ ಬರುತ್ತಿದೆ. ಹಿಂದೂ ಸಂಘಟನೆಯ ಮೇಲೆ ಆರೋಪಗಳಾಗುತ್ತಿರುವುದರ ಸತ್ಯಾಂಶವನ್ನು ಸಮಾಜದ ಮುಂದೆ ಬಿಚ್ಚಿಡುವ ಉದ್ದೇಶದಿಂದ ಸಭೆಯನ್ನು ಆಯೋಜಿಸಲಾಗಿದೆ. ಎಂದರು.

ಬೆಳ್ತಂಗಡಿಯ ಖ್ಯಾತ ಹಿಂದುತ್ವ ನ್ಯಾಯವಾದಿ ಸುಬ್ರಹ್ಮಣ್ಯ ಅಗರ್ತ ಮಾತನಾಡುತ್ತಾ, ಯಾವುದೇ ಆರೋಪಿಯನ್ನು ಬಂಧಿಸದೇ ಇದ್ದರೂ ಕೂಡ ಯಾವುದೇ ಆರೊಪ ಸಿದ್ಧವಾಗದೇ ಇದ್ದರೂ ಕೂಡ ಸನಾತನ ಸಂಸ್ಥೆಯ ಮೇಲೆ ಸುಳ್ಳು ಆರೋಪವನ್ನು ಹಾಕುತ್ತಿರುವುದು ಖಂಡನೀಯ ನಾವೆಲ್ಲರೂ ಜಾಗೃತರಾಗಿ ಸರಕಾರದ ವಿರುದ್ಧ ಆಗ್ರಹವನ್ನು ಮಾಡಬೇಕಿದೆ, ಇನ್ನು ಮುಂದೆ ಯಾವುದೇ ಕಾರಣಕ್ಕೂ ಸನಾತನ ಸಂಸ್ಥೆ ಅಥವಾ ಯಾವುದೇ ಹಿಂದುತ್ವಾದಿ ಸಂಘಟನೆಗಳ ಮೇಲೆ ಇಂತಹ ಆರೋಪವನ್ನು ಮಾಡುವ ಕೆಲಸಕ್ಕೆ ಕೈ ಹಾಕಬಾರದೆಂದು ಈ ಜನಸಂವಾವ ಸಭೆಯ ಮೂಲಕ ಒತ್ತಾಯಿಸುತ್ತಿದ್ದೇವೆ. ಎಂದರು.
ಸನಾತನ ಸಂಸ್ಥೆಯ ವತಿಯಿಂದ ಸೌ ಲಕ್ಷ್ಮೀ ಪೈ ಸನಾತನ ಸಂಸ್ಥೆಯ ಮೇಲಾಗುತ್ತಿರುವ ಸುಳ್ಳು ಆರೋಪಗಳ ಬಗ್ಗೆ ಮಾಹಿತಿಯನ್ನು ನೀಡಿದರು.

Leave a Response