Recent Posts

Monday, January 20, 2025
ಸಿನಿಮಾಸುದ್ದಿ

ರಕ್ಷಿತಾ ಪ್ರೇಮ್ ಸಹೋದರ ಅಭಿಷೇಕ್‌ಗೆ ಸುಧಾರಾಣಿ ಮಗಳು ಜತೆಯಾಗ್ತಾರಾ?! – ಕಹಳೆ ನ್ಯೂಸ್

ಬೆಂಗಳೂರು: ವಿಲನ್ ನಂತರ ಡೈರೆಕ್ಟರ್ ಪ್ರೇಮ್ ಈಗ ತಮ್ಮ ಪತ್ನಿ ರಕ್ಷಿತಾ ಸಹೋದರ ಅಭಿಷೇಕ್ ರನ್ನು ಸ್ಯಾಂಡಲ್ ವುಡ್ ಗೆ ಪರಿಚಯಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅಭಿಷೇಕ್ ಗಾಗಿ ಪ್ರೇಮ್ ಸಿನಿಮಾವೊಂದನ್ನು ಮಾಡಲಿದ್ದಾರೆ.

ಮಾರ್ಚ್ 31 ರಂದು ರಕ್ಷಿತಾ ಹುಟ್ಟುಹಬ್ಬದ ದಿನವೇ ಅಭಿಷೇಕ್ ಹೊಸ ಸಿನಿಮಾ ಟೈಟಲ್, ಫಸ್ಟ್ ಲುಕ್ ರಿಲೀಸ್ ಮಾಡಲು ಪ್ರೇಮ್ ನಿರ್ಧರಿಸಿದ್ದಾರೆ. ಆದರೆ ಅಭಿಷೇಕ್‌ಗೆ ನಾಯಕಿಯಾಗಲಿರುವುದು ಸುಧಾರಾಣಿ ಪುತ್ರಿಯಾ? ಹೀಗೊಂದು ಸುದ್ದಿ ಕೆಲವು ದಿನಗಳ ಹಿಂದೆ ಹರಿದಾಡಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಸುಧಾರಾಣಿ ಪುತ್ರಿ ನಿಧಿ ಅಭಿಷೇಕ್ ಗೆ ನಾಯಕಿಯಾಗಿ ಮೊದಲ ಬಾರಿಗೆ ಬಣ್ಣ ಹಚ್ಚುತ್ತಾರೆ ಎಂಬ ಸುದ್ದಿ ಬಂದಿತ್ತು. ಈ ಬಗ್ಗೆ ಪ್ರೇಮ್ ಅವರನ್ನು ಕೇಳಿದಾಗ ‘ನಾನಿನ್ನೂ ನಾಯಕಿಯ ಆಯ್ಕೆ ಮಾಡಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಈ ಬಾರಿ ಪಕ್ಕಾ ಕನ್ನಡದ ಹೊಸ ಮುಖಕ್ಕೆ ಅವಕಾಶ ನೀಡುತ್ತೇನೆ’ ಎಂದು ಪ್ರೇಮ್ ಹೇಳಿಕೊಂಡಿದ್ದಾರೆ. ಹಾಗಾದರೆ ಸುಧಾರಾಣಿ ಪುತ್ರಿಯೇ ಆ ಹೊಸ ಮುಖವಾ ಎಂದು ತಿಳಿಯಲು ಕೆಲವು ದಿನ ಕಾಯಬೇಕು.