Recent Posts

Monday, January 20, 2025
ಸುದ್ದಿ

ರಾಝೀ ಭಾಯಿ ‘ರಸಗುಲ್ಲಾ’ ಅಂತಾ ಕರೆಯೋದ್ಯಾರಿಗೆ ಗೊತ್ತಾ.? – ಕಹಳೆ ನ್ಯೂಸ್

ಕೆಜಿಎಫ್ ಸೂಪರ್ ಹಿಟ್‍ನಿಂದ ರಾಕಿ ಭಾಯ್ ಯಶ್ ಫುಲ್ ಖುಷಿಯಾಗಿದ್ದಾರೆ. ಅಲ್ಲದೆ ಯಶ್ ಈಗ ಬಿಡುವಿಲ್ಲದಂತಾಗಿದ್ದಾರೆ. ಈ ಮಧ್ಯೆ ರಾಕಿ ಭಾಯ್ ಲೈಫ್‍ಗೆ ರಸಗುಲ್ಲಾ ಎಂಟ್ರಿಯಾಗಿದ್ದಾರೆ. ಅಯ್ಯೋ ಯಾರಪ್ಪ ಈ ರಸಗುಲ್ಲಾ ಅಂದ್ಕೊಂಡ್ರಾ..? ಅದು ಬೇರೆ ಯಾರು ಅಲ್ಲ. ಯಶ್‍ಮತ್ತು ರಾಧಿಕಾರ ಲಿಟಲ್ ಪ್ರಿನ್ಸೆಸ್.

ಹೌದು ಸದ್ಯ ಫುಲ್ ಬ್ಯುಸಿಯಾಗಿರುವ ನಟ ಯಶ್‍ಗೆ ಕಳೆದ ಡಿಸೆಂಬರ್ ನಲ್ಲಿ ಮುದ್ದಿನ ಮಗಳ ಜನನವಾಗಿತ್ತು. ಹೆಣ್ಣು ಮಗುವಿನ ತಂದೆಯಾದಾಗಿನಿಂದ ಯಶ್ ಸಂತೋಷದಲ್ಲಿ ತೇಲಾಡ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಒಂದು ದಿನವೂ ಯಶ್‍ಗೆ ತಮ್ಮ ಕಂದನನ್ನು ನೋಡದೆ ಇರಲಾಗುವುದಿಲ್ಲವಂತೆ. ಅಲ್ಲದೆ ತಮ್ಮ ಮುದ್ದು ಕಂದನಿಗೆ ಇನ್ನೂ ನಾಮಕರಣ ಆಗದ ಹಿನ್ನೆಲೆಯಲ್ಲಿ ರಸಗುಲ್ಲಾ ಅಂತಾ ಕರೆಯುತ್ತಾರಂತೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಿಂದೆ ಯಶ್ ರಾಧಿಕಾ ತಮ್ಮ ಮಗಳಿಗೆ ಯಶಿಕಾ ಎಂದು ಹೆಸರಿಡಲಿದ್ದಾರೆ ಎಂಬ ಸುದ್ದಿ ಹರಿದಾಡ್ತಿತ್ತು. ಸದ್ಯಕ್ಕೆ ರಸಗುಲ್ಲಾ ಅಂತಲೇ ಮಗಳನ್ನು ಯಶ್ ರಾಧಿಕಾ ಮುದ್ದಿಸುತ್ತಿದ್ದಾರೆ.