Monday, January 20, 2025
ಸುದ್ದಿ

ಚೆನ್ನೈನ ವಂಡಲೂರು ಮೃಗಾಲಯದ ಎರಡು ಹುಲಿಗಳನ್ನು ದತ್ತು ಪಡೆದ ನಟ ವಿಜಯ್ ಸೇತುಪತಿ – ಕಹಳೆ ನ್ಯೂಸ್

ಚೆನೈ: ತಮಿಳಿನ ಪ್ರತಿಭಾವಂತ ನಟ ವಿಜಯ್ ಸೇತುಪತಿ ಕೇವಲ ನಟನಾಗಿ ಮನೆಮಾತಾಗಿದ್ದಾರೆ. ಈ ನಟನ ಪ್ರಾಣಿ ಪ್ರೇಮ ಇದೀಗ ಸುದ್ದಿಯಾಗಿದೆ. ಅಂದಹಾಗೆ ವಿಜಯ್ ಚೆನ್ನೈನ ವಂಡಲೂರು ಮೃಗಾಲಯದ ಎರಡು ಹುಲಿಗಳನ್ನು ದತ್ತು ಪಡೆದಿದ್ದಾರೆ.

ಐದು ವರ್ಷದ ಆದಿತ್ಯಾ ಮತ್ತು ಅದರ ಸಂಗಾತಿ ನಾಲ್ಕೂವರೆ ವರ್ಷದ ಆರತಿಯನ್ನು ದತ್ತು ತೆಗೆದುಕೊಂಡಿದ್ದಾರೆ. ಚೆನ್ನೈನ ಮೃಗಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಝೂ ಅಧಿಕಾರಿಗಳಿಗೆ 5 ಲಕ್ಷ ರೂಪಾಯಿ ಚೆಕ್ ಹಸ್ತಾಂತರಿಸುವ ಮೂಲಕ ಪ್ರಾಣಿಗಳನ್ನು ದತ್ತು ಪಡೆದ ವಿಜಯ್ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವ ವಿಚಾರವನ್ನು ನನ್ನ ಗೆಳೆಯರು ನನಗೆ ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹೀಗಾಗಿ ಮೃಗಾಲಯದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಹುಲಿಗಳನ್ನು ದತ್ತುಪಡೆದಿದ್ದೇನೆ. ಆರು ತಿಂಗಳ ಬಳಿಕ ಬೇರೆ ಪ್ರಾಣಿಗಳನ್ನು ದತ್ತುಪಡೆಯುವ ಯೋಚನೆ ಇದೆ ಎಂದು ಇದೇ ವೇಳೆ ಹೇಳಿದ ನಟ, ಪಕ್ಷಿ, ಸರಿಸೃಪ, ಅಥವಾ ಸಿಂಹ, ಹುಲಿ ಚಿರತೆಯಂತಹ ದೊಡ್ಡ ಪ್ರಾಣಿಗಳನ್ನು ಸಾರ್ವಜನಿಕರು ದತ್ತು ಸ್ವೀಕರಿಸಬಹುದಾಗಿದೆ.

ಈ ಪ್ರಾಣಿಗಳಿಗೆ ತಮ್ಮ ಕೈಲಾದ ಸೇವೆ ಸಲ್ಲಿಸಬಹುದು ಎಂದವರು ವಿವರಿಸಿದರು. ಅಂದಹಾಗೆ ಈ ಹಿಂದೆಯೂ ಸೇತುಪತಿ ಕೆಲವು ಪ್ರಾಣಿಗಳನ್ನು ದತ್ತು ಪಡೆದಿದ್ದರು.

ಯಾವ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ ಸೇತುಪತಿ
ಅಂದಹಾಗೆ ವಿಜಯ್ ಸೇತುಪತಿ ಇದೀಗ ಸೈರಾ ಚಿತ್ರದ ಶೂಟಿಂಗ್ ನಲ್ಲಿದ್ದರೆ. ಮತ್ತೊಂದೆಡೆ ಸೀನು ರಾಮಸ್ವಾಮಿ ನಿರ್ದೇಶಕನ ಮಾಮನಿತಾನ್, ಹಾಗೂ ಇನ್ನೂ ಹೆಸರಿಡದ ವಿಜಯ್ ಚಂದರ್ ನಿರ್ದೇಶನದ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

ಸೇತುಪತಿ ನಟನೆಯ ಸೂಪರ್ ಡಿಲಕ್ಸ್ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಮಾರ್ಚ್ 29ಕ್ಕೆ ಚಿತ್ರ ಬಿಡುಗಡೆಯಾಗಲಿದೆ.