Monday, January 20, 2025
ಕ್ರೀಡೆಸುದ್ದಿ

2ನೇ ಏಕದಿನ ಪಂದ್ಯದಲ್ಲಿ ರೋಚಕ ಜಯಗಳಿಸಿದ ಟೀಂ ಇಂಡಿಯಾ – ಕಹಳೆ ನ್ಯೂಸ್

ನಾಗಪುರ: ನಾಗಪುರದ ವಿದರ್ಭ ಕ್ರಿಕೆಟ್ ಸಂಸ್ಥೆಯ ಮೈದಾನದಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 8 ರನ್ ಗಳ ಅಂತರದ ರೋಚಕ ಜಯಗಳಿಸಿದೆ.

ವಿರಾಟ್ ಕೊಹ್ಲಿ ಭರ್ಜರಿ ಶತಕ(116) ಗಳಿಸುವ ಮೂಲಕ ದಿಟ್ಟ ಪ್ರದರ್ಶನ ನೀಡಿದ್ದು, ಆಸ್ಟ್ರೇಲಿಯಾ ಸೋಲು ಕಂಡಿದೆ. 251 ರನ್ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ 49.3 ಓವರುಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 242 ರನ್ ಗಳಿಸಿ ಸೋಲು ಕಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆಸ್ಟ್ರೇಲಿಯಾ ಪರವಾಗಿ ಆರನ್ ಫಿಂಚ್ 37, ಉಸ್ಮಾನ್ ಕ್ವಾಜಾ 38, ಶಾನ್ ಮಾರ್ಷ್ 16 ಪೀಟರ್ ಹ್ಯಂಡ್ಸ್ ಕಾಂಬ್ 48, ಗ್ಲೆನ್ ಮ್ಯಾಕ್ಸ್ ವೆಲ್ 4, ಮಾರ್ಕಸ್ ಸ್ಟೋನಿಯಸ್ 52, ಅಲೆಕ್ಸ್ ಕ್ಯಾರಿ 22 ರನ್ ಗಳಿಸಿದರು. ಭಾರತದ ಪರವಾಗಿ ಕುಲದೀಪ್ ಯಾದವ್ 3, ವಿಜಯಶಂಕರ್ 2, ಜಸ್ಪ್ರೀತ್ ಬುಮ್ರಾ 2 ವಿಕೆಟ್ ಪಡೆದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿದ ಭಾರತ ಖಾತೆ ಆರಂಭಕ್ಕೂ ಮೊದಲೇ ರೋಹಿತ್ ಶರ್ಮಾ ಅವರ ವಿಕೆಟ್ ಕಳೆದುಕೊಂಡಿತು. ಶಿಖರ್ ಧವನ್ 21, ವಿರಾಟ್ ಕೊಹ್ಲಿ 116, ಅಂಬಾಟಿ ರಾಯುಡು 18, ವಿಜಯಶಂಕರ 46, ಕೇದಾರ್ ಜಾಧವ್ 11, ಎಂ.ಎಸ್. ಧೋನಿ 0, ರವೀಂದ್ರ ಜಡೇಜ 21, ಕುಲದೀಪ್ ಯಾದವ್ 3, ಮೊಹಮ್ಮದ್ ಶಮಿ ಅಜೇಯ 2, ಜಸ್ಪ್ರೀತ್ ಬೂಮ್ರಾ 0 ರನ್ ಗಳಿಸಿದರು. ಅಂತಿಮವಾಗಿ ಭಾರತ 48.2 ಓವರುಗಳಲ್ಲಿ ಎಲ್ಲ ವಿಕೆಟ್ ಕಳೆದುಕೊಂಡು 250 ರನ್ ಗಳಿಸಿತು.