Monday, January 20, 2025
ಸುದ್ದಿ

ವಂಚನೆ ಮತ್ತು ದೊಂಬಿ ಪ್ರಕರಣ: 17 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಇಬ್ಬರ ಬಂಧನ – ಕಹಳೆ ನ್ಯೂಸ್

ಮಂಗಳೂರು: ವಂಚನೆ ಮತ್ತು ದೊಂಬಿ ಪ್ರಕರಣದಲ್ಲಿ ಕಳೆದ 17 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಇಬ್ಬರನ್ನು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ಆದೇಶದಂತೆ ರೌಡಿ ನಿಗ್ರಹ ದಳದ ಸಿಬ್ಬಂದಿ ಬಂಧಿಸಿದ್ದಾರೆ.

ಮೂಲ್ಕಿ ಬಪ್ಪನಾಡುವಿನ ಕೆ.ಎ ಇಬ್ರಾಹಿಂ ತಿರುವೈಲುವಿನ ಹಬೀಬುಲ್ಲಾ ಬಂಧಿತರು. ಬಂಧಿತ ಇಬ್ರಾಹಿಂ 2002 ರಲ್ಲಿ ವಂಚನೆ ಪ್ರಕರಣ ಭಾಗಿಯಾಗಿದ್ದ. ನಂತರ ನ್ಯಾಯಾಲಯಕ್ಕೆ ಹಾಜರಾಗದೇ ಸುಮಾರು 17 ವರ್ಷಗಳಿಂದ ತಲೆಮರೆಸಿಕೊಂಡು ವಿದೇಶದಲ್ಲಿದ್ದ.

ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಪಿಯ ಪತ್ತೆಯ ಬಗ್ಗೆ ನ್ಯಾಯಾಲಯವು ಈತನ ಮೇಲೆ ವಾರೆಂಟ್ ಜಾರಿಯಾಗಿತ್ತು. ಇದೀಗ ಮುಲ್ಕಿಗೆ ಬಂದ ಬಗ್ಗೆ ಮಾಹಿತಿ ಪಡೆದ ರೌಡಿ ನಿಗ್ರಹ ದಳದ ಸಿಬ್ಬಂದಿಯವರು ಈತನನ್ನು ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನೋರ್ವ ಆರೋಪಿಯಾದ ಹಬೀಬುಲ್ಲಾ 2007 ನೇ ವರ್ಷದಲ್ಲಿ ದೊಂಬಿ ಪ್ರಕರಣದಲ್ಲಿ ಭಾಗಿಯಾಗಿದ್ದ. ಈತ ನ್ಯಾಯಾಲಯಕ್ಕೆ ಹಾಜರಾಗದೇ ಸುಮಾರು 17 ವರ್ಷಗಳಿಂದ ತಲೆಮರೆಸಿಕೊಂಡಿದ್ದು, ಆರೋಪಿಯ ಪತ್ತೆಯ ಬಗ್ಗೆ ನ್ಯಾಯಾಲಯ ಈತನ ಮೇಲೆ ಸಹ ವಾರೆಂಟ್ ಹೊರಡಿಸಿತ್ತು .ಮುಂದಿನ ಕ್ರಮಕ್ಕಾಗಿ ಆರೋಪಿಗಳನ್ನು ಗ್ರಾಮಾಂತರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.