Tuesday, January 21, 2025
ಸುದ್ದಿ

ಪೊಳಲಿ ಬ್ರಹ್ಮಕಲಶೋತ್ಸವಕ್ಕೆ ಬಂಟ್ವಾಳ ತಾಲೂಕಿನಿಂದ ಹೊರಕಾಣಿಕೆ ಸಮರ್ಪಣೆ – ಕಹಳೆ ನ್ಯೂಸ್

ಬಂಟ್ವಾಳ: ಮಾ.4 ರಿಂದ 13 ರವರೆಗೆ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆಯುವ ಬ್ರಹ್ಮಕಲಶೋತ್ಸವಕ್ಕೆ ಬಂಟ್ವಾಳ ತಾಲೂಕಿನಿಂದ ಹೊರಕಾಣಿಕೆ ಮೆರವಣಿಗೆಯ ಮೂಲಕ ಕ್ಷೇತ್ರಕ್ಕೆ ಸಮರ್ಪಿಸಲಾಯಿತು. 

ಬಿಸಿರೋಡಿನ ವ್ರತ್ತದ ಬಳಿಯ ಗದ್ದೆಯಿಂದ ಆಕರ್ಷಕ ರೀತಿಯಲ್ಲಿ ಮೆರವಣಿಗೆ ಹೊರಟಿತು. ಶ್ರೀ ದಾಮ ಮಾಣಿಲ ದ ಮೋಹನದಾಸ ಸ್ವಾಮೀಜಿ ಹೊರಕಾಣಿಕೆ ಮೆರವಣಿಗೆಗೆ ಚಾಲನೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮೆರವಣಿಗೆಯ ಉದ್ದಕ್ಕೂ ಬಂಟ್ವಾಳ ತಾಲೂಕಿನ ವಿವಿಧ ರೀತಿಯ ಗೊಂಬೆ, ಚೆಂಡೆ , ವಾದ್ಯ ವ್ರಂದದ ಮೂಲಕ ಭಕ್ತರು ಭಜನೆ ಹಾಡುತ್ತಾ ತೆರಳಿದರು. ಬಿಸಿರೋಡಿನಿಂದ ಕೈಕಂಬದ ವರೆಗೆ ಪಾನೀಯ ವ್ಯವಸ್ಥೆ ಗಳನ್ನು ಮಾಡಲಾಗಿತ್ತು.

ಶಾಸಕ ರಾಜೇಶ್ ನಾಯಕ್ ಮಾಜಿ ಸಚಿವ ರಮಾನಾಥ ರೈ, ಜಿ.ಪಂ.ಸದಸ್ಯ ರಾದ ಚಂದ್ರಪಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್, ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವದಾಸ್ ಶೆಟ್ಟಿ ಮತ್ತಿತರರು ಹಾಜರಿದ್ದರು.