ಬೆಂಗಳೂರು: ನಟಸಾರ್ವಭೌಮ ಪುನೀತ್ ರಾಜ್ ಕುಮಾರ್ ಮತ್ತು ಪವನ್ ಒಡೆಯರ್ ಕಾಂಬಿನೇಷನ್‌ನ ಎರಡನೇ ಚಿತ್ರ. ಈ ಹಿಂದೆ ‘ರಣವಿಕ್ರಮ’ ಚಿತ್ರದಲ್ಲಿ ಈ ಜೋಡಿ ಒಂದಾಗಿ ಮೋಡಿ ಮಾಡಿದ್ದರು. ಇದೀಗ ‘ನಟಸಾರ್ವಭೌಮ’ ಚಿತ್ರದ ಮುಖೇನ ಕರ್ನಾಟಕದಾದ್ಯಂತ ಪ್ರೇಕ್ಷಕರನ್ನು ಗಮನಸೆಳೆದಿದ್ದಾರೆ.
ಇದಕ್ಕೆ ಸಾಕ್ಷಿ ಎಂಬಂತೆ ಈ ಚಿತ್ರ 25 ನೇ ದಿನಗಳನ್ನು ಪೂರೈಸಿ 50 ನೇ ದಿನದತ್ತ ಮುನ್ನುಗ್ಗಿ ಸಾಗ್ತಾ ಇದೆ. ಕಳೆದ ಭಾನುವಾರವಷ್ಟೇ ‘ನಟಸಾರ್ವಭೌಮ’ ಯಶಸ್ವಿಗಾಗಿ ಚಿತ್ರತಂಡ ರಾಜ್ಯಾದ್ಯಂತ ವಿಜಯ ಯಾತ್ರೆಯನ್ನು ಕೈಗೊಂಡಿತ್ತು.
ಅದರಂತೆ ಪುನೀತ್ ರಾಜ್ ಕುಮಾರ್ ಎಲ್ಲಾ ಊರಿಗಳಿಗೆ ಹೋಗಿ ಅಭಿಮಾನಿಗಳೊಂದಿಗೆ ಕಾಲ ಕಳೆದಿದ್ದಾರೆ. ಇದೀಗ ಹೊಸ ವಿಷಯವೇನೆಂದರೆ ಭರ್ಜರಿಯಾಗಿ ಮುನ್ನುಗ್ಗುತ್ತಿರುವ ನಟಸಾರ್ವಭೌಮ ಚಿತ್ರದ ಟೈಟಲ್ ಹಾಡಿನ ಫ್ಲ್ಯೂಟ್ ವರ್ಷನ್ ಬಿಡುಗಡೆಗೊಂಡಿದೆ. ಈ ಮ್ಯೂಸಿಕ್ ಕೇಳುಗರನ್ನ ಹುಚ್ಚೆಬ್ಬಿಸುವಂತೆ ಮಾಡಿದೆ.