ಬಂಟ್ವಾಳ: 2018-19 ಸಾಲಿನ ಅನಿರ್ಬಂಧಿತ ಅನುದಾನ ಮತ್ತು ಅಧಿಭಾರ ಸುಲ್ಕದಡಿ 3 ಶೇ ಅನುದಾನದಲ್ಲಿ ಬಂಟ್ವಾಳ ತಾಲೂಕು ಪಂಚಾಯತ್ ವಿಕಲಚೇತನರಿಗೆ ಶ್ರವಣ ಸಾಧನ , ವಾಕಿಂಗ್ ಸ್ಟಿಕ್, ಗಾಲಿ ಕುರ್ಚಿ, ನೀರಿನ ಬೆಡ್, ಹೊಲಿಗೆ ಯಂತ್ರ, ವಾಕರ್ ಮತ್ತು ತ್ರಿಚಕ್ರ ಸೈಕಲ್ ವಿತರಣೆ ತಾಲೂಕು ಪಂಚಾಯತ್ ಕಚೇರಿಯಲ್ಲಿ ನಡೆಯಿತು.
ಒಟ್ಟು 30 ಮಂದಿ ವಿಕಲ ಚೇತನರಿಗೆ ಈ ಸೌಲಭ್ಯಗಳನ್ನು ತಾ.ಪಂ.ಅಧ್ಯಕ್ಷ ಚಂದ್ರ ಹಾಸ ಅವರ ಅಧ್ಯಕ್ಷ ತೆಯಲ್ಲಿ ವಿತರಿಸಲಾಯಿತು.
ಈ ಸಂಧರ್ಭದಲ್ಲಿ ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಜಿ.ಪಂ.ಸದಸ್ಯ ರಾದ ಎಂ.ಎಸ್.ಮಹಮ್ಮದ್, ಮಮತಾ ಗಟ್ಟಿ, ರವೀಂದ್ರ ಕಂಬಳಿ, ಮಂಜುಳಾ ಮಾದವ ಮಾವೆ, ತುಂಗಪ್ಪ ಬಂಗೇರ, ಜಯಶ್ರೀ ಕೊಡಂದೂರು, ತಾಲೂಕು ಪಂಚಾಯತ್ ಕಾರ್ಯನಿರ್ವಣಾಧಿಕಾರಿ ರಾಜಣ್ಣ, ಸಹಾಯಕ ನಿರ್ದೇಶಕ ಡಿ.ಪ್ರಶಾಂತ್, ಎ.ಒ. ಶಾರದಾ, ಮ್ಯಾನೇಜರ್ ಶಾಂಭವಿ, ವಲಯ ಮೇಲ್ವಿಚಾರಕ ಕುಶಾಲಪ್ಪ ಗೌಡ ಹಾಗೂ ತಾ.ಪಂ.ಸಿಬ್ಬಂದಿ ಗಳು ಉಪಸ್ಥಿತರಿದ್ದರು.