Monday, January 20, 2025
ಸುದ್ದಿ

ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದ: ಮಧ್ಯಸ್ಥಿಕೆ ಮೂಲಕ ಬಗೆಹರಿಸಲು ಸುಪ್ರೀಂಕೋರ್ಟ್ ಸಲಹೆ – ಕಹಳೆ ನ್ಯೂಸ್

ಹೊಸದಿಲ್ಲಿ: ಮಧ್ಯಸ್ಥಿಕೆ ಮೂಲಕ ವಿವಾದ ಬಗೆಹರಿಸಲು ಸುಪ್ರೀಂ ಕೋರ್ಟ್ ಸೂಚಿಸಿದ್ದು, ಹಿಂದೂ ಮಹಾಸಭಾ ವಿರೋಧ ವ್ಯಕ್ತಪಡಿಸಿತ್ತು. ಪ್ರಕರಣವನ್ನು ಮಧ್ಯಸ್ಥಿಕೆ ಮೂಲಕ ಬಗೆಹರಿಸಬೇಕೆ ಎನ್ನುವ ಬಗೆಗಿನ ತೀರ್ಪನ್ನು ಕೋರ್ಟ್ ಕಾಯ್ದಿರಿಸಿದೆ.

ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದ ಭೂಮಿಗಾಗಿ ನಡೆಯುತ್ತಿರುವ ವಿವಾದವಲ್ಲ ಬದಲಾಗಿ ‘ನಂಬಿಕೆ ಹಾಗು ಭಾವನೆಯ ವಿಚಾರ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

“ಜನರು ಸಂಧಾನವನ್ನು ಒಪ್ಪುವುದಿಲ್ಲ” ಎಂದು ಹಿಂದೂ ಮಹಾಸಭಾ ಹೇಳಿದ್ದು, “ಅದು ವಿಫಲವಾಗುತ್ತದೆ ಎಂದು ನೀವು ಹೇಳುತ್ತಿದ್ದೀರಾ. ಪೂರ್ವ ನಿರ್ಣಯ ಮಾಡಬೇಡಿ. ನಾವು ಮಧ್ಯಸ್ಥಿಕೆಗೆ ಯತ್ನಿಸುತ್ತಿದ್ದೇವೆ” ಎಂದು ಕೋರ್ಟ್ ಪ್ರತಿಕ್ರಿಯಿಸಿತು.

ಜಾಹೀರಾತು
ಜಾಹೀರಾತು
ಜಾಹೀರಾತು