ಕುಕ್ಕೇ ಸುಬ್ರಹ್ಮಣ್ಯ ಬಂದ್ ಮಾಡುವುದು ಕಾನೂನು ಬಾಹಿರ ; ಬಂದ್ ಗೆ ತಡೆ – ಉಚ್ಚನ್ಯಾಯಾಲಯದಿಂದ ಮಹತ್ವದ ತೀರ್ಪು – ಕಹಳೆ ನ್ಯೂಸ್
ಸುಬ್ರಹ್ಮಣ್ಯ : ಧಾರ್ಮಿಕ ಕ್ಷೇತ್ರದಲ್ಲಿ ಬಂದ್ ನಡೆಸುವುದರ ಬಗ್ಗೆ ಉಚ್ಛನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.
ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹಿತರಕ್ಷಣಾ ವೇದಿಕೆ ಮಾ. 07 ರಂದು ಕುಕ್ಕೇ ಸುಬ್ರಹ್ಮಣ್ಯ ಬಂದ್ ಗೆ ಕರೆ ನೀಡಿತ್ತು, ಆದರೆ, ಈ ಕುರಿತಂತೆ ದೂರನ್ನು ಆಲಿಸಿ ಅನಧಿಕೃತವಾಗಿ ಬಂದ್ ನಡೆಸದಂತೆ ಉಚ್ಛನ್ಯಾಯಾಲಯವು ಇಂದು ಮದ್ಯಾಹ್ನ ಮಹತ್ವದ ತೀರ್ಪು ನೀಡಿದ್ದು, ವ್ಯಾಜ ಸಂಖ್ಯೆ W.P no. 10337/2019(GM-police)ರ ಆದೇಶವನ್ನು ಸಂಬಂಧ ಪಟ್ಟ ಪೊಲೀಸ್ ಇಲಾಖೆಗೆ ನೀಡಿರುತ್ತದೆ.
ಧಾರ್ಮಿಕ ಕ್ಷೇತ್ರ ದಲ್ಲಿ ಬಂದ್ ನಡೆಸದಂತೆ ಈ ಕಾಯ್ದೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದು, ಹಿತರಕ್ಷಣಾ ಸಮಿತಿಯ ಬಂದ್ ಗೆ ಕಾನೂನು ತೊಡಕು ಉಂಟಾಗಿದೆ.
ನ್ಯಾಯವಾದಿ ಉದಯಪ್ರಕಾಶ್ ಮುಳಿಯ ವಾದ ಮಂಡಿಸಿದರು.