Sunday, January 19, 2025
ಅಂಕಣ

” ಶ್ರೀ ದೇವಿಸ್ತುತಿ ” ಕಟ್ಟೆತ್ತಿಲ ಗೋಪಾಲಕೃಷ್ಣ ಭಟ್ ಅವರ ಗುರುಪಾದಪದ್ಮ ಕವನಗಳ ಸರಣಿ – 25

ಶ್ರೀ ದೇವಿಸ್ತುತಿ

ದುರ್ಗ ದೇವಿಯೆ ಕಟೀಲು ತಾಯೆ|
ಕಟೀಲು ಕ್ಷೇತ್ರ ವಾಸಿನಿ ಮಾಯೆ||
ದುಂಬಿಯ ರೂಪದಿ ಬಂದಿಹ ಜನನ|
ಭಕ್ತರ ಹೃದಯದಿ ನಿಂದಿಹ ವಾಣಿ ||೧||
ಅರುಣಾಸುರನನು ಸಂಹರಿಸಿ|
ಭ್ರಮರಾಂಬಿಕೆಯು ನೀನೆನಿಸಿ||
ನಂದಿನಿ ನದಿಯ ಒಡಲಲ್ಲಿ|
ಜುಳು ಜುಳು ಮಂಜುಳ ಗಾನದಲಿ||೨||
ನವರಾತ್ರಿಯಲಿ ಸಂಭ್ರಮವು|
ನವವಿಧ ಪೂಜೆ ವಿಶೇಷವು||
ಕುಂಕುಮಾರ್ಚನೆ ಅಲಂಕಾರವು|
ಹೂವಿನ ಪೂಜೆ ವಿಶೇಷವು||೩||
ನಿನ್ನಯ ನಾಮವ ನೆನೆಯುವೆನು|
ನಿನ್ನನೆ ನಿತ್ಯವು ನಂಬಿಹೆನು||
ಕಟೀಲು ಕ್ಷೇತ್ರದಿ ನೀ ನೆಲೆಸಿ|
ಪೋರೆಯೋ ಮಾತೆಯೆ ಉದ್ಧರಿಸಿ||೪||
ಯಕ್ಷಗಾನದ ಸೇವೆಗೆ ಒಲಿವೆ|
ರಂಗದ ನಾಟ್ಯಕೆ ಹೆಜ್ಜೆಯ ನಿಡುವೆ||
ಮಲ್ಲಿಗೆ ಹೂವಿನ ದಂಡೆಯ ಮಾಲೆ|
ಅರಿತವರಿಹರೇ ನಿನ್ನಯ ಲೀಲೆ||೫||

ಜಾಹೀರಾತು

ಜಾಹೀರಾತು
ಜಾಹೀರಾತು

Leave a Response