Wednesday, January 22, 2025
ಸುದ್ದಿ

ಮೋದಿ ವಿರುದ್ಧ ದಿನೇಶ್ ಗುಂಡೂರಾವ್ ಗರಂ – ಕಹಳೆ ನ್ಯೂಸ್

ಕಳೆದ ಚುನಾವಣೆಗಿಂತ ಮೊದಲು ಮೋದಿಯವರು ಜನರಲ್ಲಿ ಬಹಳ ಭರವಸೆ ಮೂಡಿಸಿದ್ದರು. 5 ವರ್ಷಗಳಲ್ಲಿ ಅಚ್ಚೇ ದಿನ್ ಬರುತ್ತದೆ ಎಂದು ಹೇಳಿದ್ದರು. ನನಗೆ ಅವಕಾಶ ಕೊಡಿ ದೇಶದ ಎಲ್ಲಾ ಸಮಸ್ಯೆಗಳನ್ನು ನಿವಾರಿಸುವೆ ಎಂದಿದ್ದರು. ಆದರೆ, ಈ ಐದು ವರ್ಷಗಳಲ್ಲಿ ಯಾವ ಭರವಸೆಗಳನ್ನು ಅವರು ಈಡೇರಿಸಿಲ್ಲ. ಅಲ್ಲದೆ ದೇಶದಲ್ಲಿ ಅತೀ ಹೆಚ್ಚು ನಿರುದ್ಯೋಗ ಸೃಷ್ಟಿಯಾಗಿದೆ ಎಂದು ದಿನೇಶ್ ಗುಂಡೂರಾವ್ ಮೋದಿ ವಿರುದ್ಧ ಕಿಡಿಕಾರಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ನಗರದ ಹೊರವಲಯದ ಅಡ್ಯಾರ್ ಗಾರ್ಡನ್‌ನಲ್ಲಿ ನಡೆದ ಕಾಂಗ್ರೆಸ್ ಪರಿವರ್ತನಾ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು,ಈ ಬಾರಿಯ ಲೋಕಸಭಾ ಚುನಾವಣೆ ಈ ದೇಶದ ಭವಿಷ್ಯವನ್ನು ರೂಪಿಸುವಂತಹ ಚುನಾವಣೆ ಆಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮುಂದಿನ ದಿನಗಳಲ್ಲಿ ನಾವು ಯಾವ ದಿಕ್ಕಿನಲ್ಲಿ ಈ ದೇಶವನ್ನು ಸಾಗಿಸುತ್ತೇವೆ, ಯಾವ ದಿಕ್ಕಿನಲ್ಲಿ ಈ ದೇಶ ಹೋಗುತ್ತದೆ ಎಂದು ನಿರ್ಣಯ ಮಾಡುವಂತಹ ಪ್ರಮುಖ ಚುನಾವಣೆಯಾಗುತ್ತದೆ ಎಂದು ಹೇಳಿದ್ದಾರೆ.

ಮೋದಿಯವರದ್ದು ಕಳಪೆ ಸಾಧನೆಯಾಗಿದೆ. ಕಳೆದ 14 ವರ್ಷಗಳಿಗಿಂತ ಇಂದು ರೈತರ ಆದಾಯ ಕೆಳಮಟ್ಟಕ್ಕೆ ಹೋಗಿದೆ. ಅಡಿಕೆ, ರಬ್ಬರ್ ಬೆಳೆ ಕುಸಿತ ಆಗಿದೆ. ಆದರೆ ಮೋದಿ ಸರ್ಕಾರ ರೈತರಿಗೆ ಇನ್ನೂ ಬೆಂಬಲ ಬೆಲೆ ಘೋಷಣೆ ಮಾಡಿಲ್ಲ. ಹೊರಗಡೆಯಿಂದ ಬರುವ ಅಡಿಕೆ, ರಬ್ಬರ್‌ಗಳಿಗೆ ಯಾಕೆ ನೀವು ಕಡಿವಾಣ ಹಾಕಿಲ್ಲ. ಅಥವಾ ಸುಂಕ ಹೆಚ್ಚು ಮಾಡಿಲ್ಲ ಎಂದು ಪ್ರಶ್ನೆ ಮಾಡಿದರು.