Sunday, January 19, 2025
ಅಂಕಣ

” ಜಯ ಜಯ ಹನುಮಂತ ” ಕಟ್ಟತ್ತಿಲ ಗೋಪಾಲಕೃಷ್ಣ ಭಟ್ ಅವರ ಗುರುಪಾದಪದ್ಮ ಕವನಗಳ ಸರಣಿ – 26

ಜಯ ಜಯ ಹನುಮಂತ

ಜಯ ಜಯ ಕೃಷ್ಣಾ ಮುಕುಂದಾ ಮುರಾರೇ|
ಜಯ ಜಯ ಕೃಷ್ಣಾ ಮುಕುಂದಾ ಮುರಾರೇ||ಪ||
ಹಾಲು ಕದ್ದ ಕೃಷ್ಣ ಬೆಣ್ಣೆ|
ಸೀರೆ ಕದ್ದ ರಾಧೆ ಮನವ ಗೆದ್ದ ||
ಕಳ್ಳರ ಕಳ್ಳ ಕಾಣಿರೋ ಪಾಂಡುರಂಗ|
ಶ್ರೀ ವಿಠ್ಠಲದೇವ ಕಾಣಿರೋ||೧||
ಜಯ ಜಯ ಕೃಷ್ಣಾ ಮುಕುಂದಾ ಮುರಾರೇ|
ಜಯ ಜಯ ಕೃಷ್ಣಾ ಮುಕುಂದಾ ಮುರಾರೇ||ಪ||
ಹಾಲು ಬೇಕೆ ಬೆಣ್ಣೆ ಬೇಕೆ |
ತುಳಸಿಯ ಮಾಲೆ ಒಂದೆ ಸಾಕೆ||
ಇಷ್ಟ ಸಿದ್ಧ ಮಾಡು ಬೇಗ ಬಾ|
ಶ್ರೀ ವಿಠ್ಠಲದೇವ ಕಾಣೀರೋ||೨||
ಜಯ ಜಯ ಕೃಷ್ಣಾ ಮುಕುಂದಾ ಮುರಾರೇ|
ಜಯ ಜಯ ಕೃಷ್ಣಾ ಮುಕುಂದಾ ಮುರಾರೇ||ಪ||
ನಿನ್ನ ಕರುಣೆ ಇರಲಿ ಸಾಕು|
ವಿದ್ಯ ಬುದ್ಧಿಭಾಗ್ಯ ಬೇಕು||
ನಿನ್ನ ನಾಮ ಹಾಡಿ ದಣಿವೆ ಬಾ|
ಶ್ರೀ ವಿಠ್ಠಲ ದೇವ ಕಾಣಿರೋ||೩||
ಜಯ ಜಯ ಕೃಷ್ಣಾ ಮುಕುಂದಾ ಮುರಾರೇ|
ಜಯ ಜಯ ಕೃಷ್ಣಾ ಮುಕುಂದಾ ಮುರಾರೇ||ಪ||
ಭಕ್ತಿಯಿಂದ ಮಣಿವೆ ನಾನು|
ಯುಕ್ತಿ ಶಕ್ತಿ ಕೊಡೆಯಾ ನೀನು||
ಮುಕ್ತಿಯನ್ನು ಕರುಣಿಸೆನಗೆ ಬಾ|
ಶ್ರೀ ವಿಠ್ಠಲದೇವ ಕಾಣಿರೋ||೪||
ಜಯ ಜಯ ಕೃಷ್ಣಾ ಮುಕುಂದಾ ಮುರಾರೇ|
ಜಯ ಜಯ ಕೃಷ್ಣಾ ಮುಕುಂದಾ ಮುರಾರೇ||ಪ||
ಧ್ಯಾನವನ್ನೆ ಅರಿಯೆ ನಾನು|
ಗಾನದಿಂದ ಸ್ತುತಿಸುತಿಹೆನು||
ಮಾನಿನಿಯ ಮೊರೆಯ ಕೇಳು|
ಶ್ರೀ ವಿಠ್ಠಲದೇವ ಕಾಣಿರೋ||೫||

ಜಾಹೀರಾತು

ಜಾಹೀರಾತು
ಜಾಹೀರಾತು

Leave a Response