Sunday, January 19, 2025
ಸಿನಿಮಾ

ಉಪ್ಪು ಹುಳಿ ಕಾರ – ಚಿತ್ರದ ಟೀಸರ್ ಬಿಡುಗಡೆ | ಅಂಬಿ, ಮಲಾಶ್ರೀ, ಅನುಶ್ರೀ ಬಂಬಾಟ್ ಹೆಜ್ಜೆ

ಕಹಳೆ ಸಿನಿಮಾ : “ರಾಜು ಕನ್ನಡ ಮೀಡಿಯಂ’ ಚಿತ್ರದ ಟೀಸರ್‌ ಬಿಡುಗಡೆ ಮಾಡುವುದಕ್ಕೆ ಬಂದಿದ್ದ ಅಂಬರೀಶ್‌, ಅದಾಗಿ ಒಂದು ತಿಂಗಳಲ್ಲಿ ಇನ್ನೊಂದು ಟೀಸರ್‌ ಬಿಡುಗಡೆ ಸಮಾರಂಭದಲ್ಲಿ ಕಾಣಿಸಿಕೊಂಡರು. ಇಮ್ರಾನ್‌ ಸರ್ದಾರಿಯಾ ನಿರ್ದೇಶನದ “ಉಪ್ಪು ಹುಳಿ ಖಾರ” ಚಿತ್ರ ನವೆಂಬರ್‌ 24ಕ್ಕೆ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಚಿತ್ರದ ಪಾತ್ರಗಳ ಟೀಸರ್‌ ಬಿಡುಗಡೆ ಸಮಾರಂಭ ಬುಧವಾರ ನಡೆಯಿತು.

 

ಜಾಹೀರಾತು
ಜಾಹೀರಾತು
ಜಾಹೀರಾತು

ಅಂಬರೀಶ್‌ ಅವರು ಬಂದು, ಟೀಸರ್‌ ಬಿಡುಗಡೆ ಮಾಡುವುದರ ಜೊತೆಗೆ ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಚಿತ್ರದ ಜನಪ್ರಿಯ ಹಾಡಾದ “ರೋಮಿಯೋ ಪ್ರೇಮಿಯೋ …’ ಹಾಡಿಗೆ ಅವರು ಹೆಜ್ಜೆ ಹಾಕಬೇಕೆಂದು ಚಿತ್ರತಂಡದವರು ಆಸೆಪಟ್ಟಾಗ, ಅಂಬರೀಶ್‌ ಅವರು ಮಾಲಾಶ್ರೀ ಮತ್ತು ಅನುಶ್ರೀ ಅವರ ಜೊತೆಗೆ ಹೆಜ್ಜೆ ಹಾಕಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಂಬರೀಶ್‌ ಮತ್ತು ಮಾಲಾಶ್ರೀ ಅವರು ಜೊತೆಗೆ ಹೆಜ್ಜೆ ಹಾಕಿದ್ದು ಹೊಸದೇನಲ್ಲ. ಈ ಹಿಂದೆ ಹಲವು ಚಿತ್ರಗಳಿಗೆ ಇಬ್ಬರೂ ಒಟ್ಟಿಗೇ ನೃತ್ಯ ಮಾಡಿದ್ದಾರೆ. ಈಗ ಬಹಳ ವರ್ಷಗಳ ನಂತರ ಅವರಿಬ್ಬರೂ ಜೊತೆಯಾಗಿ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.

https://youtu.be/OIrzZCkBZK0

Leave a Response