Wednesday, January 22, 2025
ಸುದ್ದಿ

ಬೋಟ್ ದಾಟುವಾಗ ಸಮುದ್ರಕ್ಕೆ ಬಿದ್ದ ವ್ಯಕ್ತಿ ಸಾವು – ಕಹಳೆ ನ್ಯೂಸ್

ಕಾರವಾರ: ಬೋಟ್‌ನಿಂದ ಬೋಟ್‌ಗೆ ದಾಟುವಾಗ ಆಯತಪ್ಪಿ ಸಮುದ್ರಕ್ಕೆ ಬಿದ್ದ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಭಟ್ಕಳ ತಾಲೂಕಿನ ಮೀನುಗಾರಿಕಾ ಬಂದರಿನಲ್ಲಿ ನಿನ್ನೆ ನಡೆದಿದೆ.

ಭಟ್ಕಳದ ಉದಯ ನಾರಾಯಣ ನಾಯ್ಕ ಮೃತ ದುರ್ದೈವಿ. ಈತ ಬೋಟ್‌ನಿಂದ ಬೋಟ್‌ಗೆ ದಾಟುತ್ತಾ ಸಾಗುತ್ತಿರುವ ವೇಳೆ ಆಯತಪ್ಪಿ ಕೆಳಗೆ ಬಿದ್ದಿದ್ದ. ತಕ್ಷಣ ಈತನ ರಕ್ಷಣೆಗೆ ಸ್ಥಳೀಯ ಮೀನುಗಾರರು ಮುಂದಾದರಾದರು ನೀರಿನಲ್ಲಿ ಮುಳುಗಿದ ಕಾರಣ ಸಾಧ್ಯವಾಗಿರಲಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೆಲ ಹೊತ್ತಿನ ಬಳಿಕ ಮೃತನ ದೇಹವನ್ನು ಹೊರತೆಗೆದು, ಭಟ್ಕಳ ಶವಾಗಾರಕ್ಕೆ ರವಾನಿಸಲಾಯಿತು. ಘಟನೆ ಸಂಬಂಧ ಭಟ್ಕಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು