Tuesday, January 21, 2025
ಸುದ್ದಿ

ವಿಶ್ವ ಆರೋಗ್ಯ ಸಂಸ್ಥೆಯ ಉಪ ಮಹಾನಿರ್ದೇಶಕಿ ಸುಧಾರಣಾ ಕ್ರಮಗಳ ವಿಜ್ಞಾನಿಯಾಗಿ ಆಯ್ಕೆ – ಕಹಳೆ ನ್ಯೂಸ್

ಹೊಸದಿಲ್ಲಿ: ವಿಶ್ವ ಆರೋಗ್ಯ ಸಂಸ್ಥೆಯ ಉಪ ಮಹಾನಿರ್ದೇಶಕಿಯಾಗಿದ್ದ ಸೌಮ್ಯಾ ಸ್ವಾಮಿನಾಥನ್ ಅವರನ್ನು ಸಂಸ್ಥೆಯಲ್ಲಿನ ಸುಧಾರಣಾ ಕ್ರಮಗಳ ಭಾಗವಾಗಿ ಮುಖ್ಯ ವಿಜ್ಞಾನಿಯನ್ನಾಗಿ ನೇಮಿಸಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಮುಖ ವೈಜ್ಞಾನಿಕ ಕೆಲಸಗಳನ್ನು ಹಾಗೂ ಅದು ನಿಗದಿ ಪಡಿಸಿರುವ ಮಾನದಂಡಗಳು ಹಾಗೂ ಗುಣಮಟ್ಟಗಳನ್ನು ಕಾಯ್ದು ಕೊಳ್ಳುವಂತೆ ಮಾಡಲು ರಚಿಸಲಾದ ವಿಭಾಗದ ನೇತೃತ್ವವನ್ನು ಅವರು ವಹಿಸುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸೌಮ್ಯಾ ಅವರು ಈ ಹಿಂದೆ ವಿಶ್ವ ಆರೋಗ್ಯ ಸಂಸ್ಥೆಯ ಮೂವರು ಉಪ ಮಹಾನಿರ್ದೇಶಕರಲ್ಲಿ ಒಬ್ಬರಾಗಿ, ಸಂಸ್ಥೆಯ ಮಹಾನಿರ್ದೇಶಕರ ಕಾರ್ಯದಲ್ಲಿ ನೆರವಾಗುವ ಮಹತ್ತರ ಜವಾಬ್ದಾರಿ ಹೊಂದಿದ್ದರು. ಈ ಹುದ್ದೆಯನ್ನು ಹೊಂದಿದ ಮೊದಲ ಭಾರತೀಯರು ಅವರಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

”ಜಗತ್ತು ಬದಲಾಗಿದೆ. ಇದೇ ಕಾರಣದಿಂದ ನಾವು ಹೊಸ ಧ್ಯೇಯೋದ್ದೇಶವನ್ನು ಹೊಂದಿದ್ದೇವೆ” ಎಂದು ವಿಶ್ವ ಆರೋಗ್ಯ ಸಂಸ್ಥೆಯ ಹೇಳಿಕೆ ತಿಳಿಸಿದೆ.