Monday, January 20, 2025
ಸುದ್ದಿ

ಸ್ವಚ್ಛ ನಗರ ರಾಂಕಿಂಗ್ ಪಟ್ಟಿಯಲ್ಲಿ ಮಂಗಳೂರು ನಗರ ತೀವ್ರ ಕುಸಿತ – ಕಹಳೆ ನ್ಯೂಸ್

ದೇಶದ ಸ್ವಚ್ಛ ನಗರ ಪಟ್ಟಿಯಲ್ಲಿ ಮಂಗಳೂರು ನಗರ ವರ್ಷದಿಂದ ವರ್ಷಕ್ಕೆ ಕುಸಿತ ಕಾಣುತ್ತಿದೆ ಆದರೆ ಈ ಕುಸಿತಕ್ಕೆ ನೈರ್ಮಲ್ಯದ ಕೊರತೆ ಅಲ್ಲ ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ ಸ್ವಚ್ಛತಾ ಆಪ್ ಅಪ್ಲೋಡ್ ಮಾಡದೇ ಇರುವುದೇ ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

2016 ರಲ್ಲಿ ಮಂಗಳೂರು ನಗರ ದೇಶದಲ್ಲಿ ಮೂರನೇ ಸ್ಥಾನ ಪಡೆಯುವ ಮೂಲಕ ಮಹತ್ತರ ಸಾಧನೆ ಮಾಡಿತ್ತು, ಆದರೆ ೨೦೧೯ ರಲ್ಲಿ ೫ನೇ ಸ್ಥಾನ ಪಡೆಯುವ ಮೂಲಕ ಸ್ವಚ್ಛತಾ ರಂಕಿಂಗ್‌ನಲ್ಲಿ ಭಾರಿ ಕುಸಿತ ಕಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಮೂಲಕ ಕಳೆದ ಕೆಲವು ವರ್ಷಗಳಿಂದ ಸ್ವಚ್ಛ ನಗರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯುವ ಪಾಲಿಕೆ ಕನಸು ಈಡೇರಲಿಲ್ಲ ಆದರೆ ಕೊರತೆಗೆ ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ ಸ್ವಚ್ಛತಾ ಡೌನ್ಲೋಡ್ ಮಾಡದಿರುವುದೇ ಈ ಕುಸಿತಕ್ಕೆ ಕಾರಣ ಎಂಬುದು ಮೊದಲನೇ ಕಾರಣ.

ಜಾಹೀರಾತು
ಜಾಹೀರಾತು
ಜಾಹೀರಾತು

ಪಾಲಿಕೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹೇಗಾದರೂ ಮಾಡಿ ಈ ಬಾರಿ ಮೊದಲ ಹತ್ತು ಸ್ಥಾನಗಳ ಒಳಗಾದರು ಬರಬೇಕು ಎಂಬ ನಿಟ್ಟಿನಲ್ಲಿ ಕಳೆದೊಂದು ವರ್ಷದಿಂದ ಹಲವು ಬಾರಿ ಸಭೆ ಕಾರ್ಯಕ್ರಮಗಳನ್ನು ನಡೆಸಿದ್ದರು ಆದರೆ ನೂತನ ಸಮೀಕ್ಷೆ ಫಲಿತಾಂಶ ಗಮನಿಸಿದಾಗ ಅದ್ಯಾವುದು ಕಾರ್ಯರೂಪಕ್ಕೆ ಬಂದಂತೆ ಕಾಣಲಿಲ್ಲ.

ಸ್ವಚ್ಛ ರಾಂಕಿಂಗ್ ಪಟ್ಟಿಯಲ್ಲಿ ಸ್ಥಾನ ಪಡೆಯಬೇಕಾದರೆ ಅಪ್ ಡೌನ್ಲೋಡ್ ಮಾಡುವುದನ್ನೇ ಪ್ರಧಾನವಾಗಿ ಪರಿಗಣಿಸಲಾಗಿತ್ತು 20000 ಆಪ್ ಡೌನ್ ಲೋಡ್ ಆಗಿದೆ ಆದರೆ ಮಂಗಳೂರು ನಗರದಲ್ಲಿ ಸಾವಿರಕ್ಕಿಂತ ಕಡಿಮೆ ಮಂದಿ ಮಾತ್ರ ಆಪ್ ಡೌನ್ಲೋಡ್ ಮಾಡಿದ್ದಾರೆ.

ನಿಗದಿತ ಸಮಯದೊಳಗೆ ಡೌನ್ಲೋಡ್ ಮಾಡಿ ಎಂದು ಸಾರ್ವಜನಿಕರಿಗೆ ಮಾಧ್ಯಮ , ಗಳಲ್ಲಿ ಮಂಗಳೂರು ಮಹಾ ನಗರ ಪಾಲಿಕೆ ಮಾಹಿತಿ ನೀಡಿದರು ಮಂಗಳೂರಿನಲ್ಲಿ ಆಪ್ ಡೌನ್ಲೋಡ್ ಆಗಲಿಲ್ಲ ಹೀಗಾಗಿ ಅಂಕ ಗಳಿಕೆಯಲ್ಲಿ ಹಿಂದೆ ಬಿದ್ದು ಎನ್ನುತ್ತಾರೆ.