Recent Posts

Monday, January 20, 2025
ಸುದ್ದಿ

ನಟ ದರ್ಶನ್ ಅಭಿಮಾನಿ ಪುಟ್ಟ ಬಾಲಕಿ ಸಾವು – ಕಹಳೆ ನ್ಯೂಸ್

ದರ್ಶನ್ ಗೆ ಪುಟ್ಟ ಮಕ್ಕಳೆಂದರೆ ತುಂಬಾ ಪ್ರೀತಿ. ಈ ನಟ ಯಾರೇ ಮಕ್ಕಳು ನೋಡಬೇಕು ಅಂತಾ ಬಯಸಿದರು ಅದನ್ನು ನೆರವೇರಿಸುತ್ತಿದ್ದರು. ಅದೇ ತರಹ ಅನಾರೋಗ್ಯದಿಂದ ಬಳಲುತ್ತಿದ್ದ ಅಭಿಮಾನಿಯೊಬ್ಬರು ಇತ್ತೀಚೆಗೆ ದರ್ಶನ್ ರ ಭೇಟಿಯಾಗಿ ಆ ಪುಟ್ಟ ಬಾಲಕಿ ಆಸೆ ಈಡೇರಿಸುವುದರ ಜೊತೆಗೆ ಆ ಕುಟುಂಬಕ್ಕೆ ಸಮಾಧಾನ ಕೂಡ ಹೇಳಿದ್ದರು. ಆದರೆ ಇದೀಗ ದುರಾದೃಷ್ಟವಶಾತ್ ಆ ಬಾಲಕಿ ಕೊನೆಯುಸಿರೆಳೆದಿದ್ದಾರೆ.

ದರ್ಶನ್ ಅಭಿಮಾನಿ ಸಾವು
ಹೌದು, ದರ್ಶನ್ ಅವರ ಕಟ್ಟಾ ಅಭಿಮಾನಿ 11 ವರ್ಷದ ಪೂರ್ವಿಕಾ ಕಳೆದೆರೆಡು ವರ್ಷದಿಂದ ಹಾರ್ಟ್ ಪ್ರಾಬ್ಲಮ್ನಿಂದಾಗಿ ಬಳಲುತ್ತಿದ್ದು, ಹೊಟ್ಟೆಯಲ್ಲಿ ನೀರು ತುಂಬಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರಣ ಆಕೆ ಬದುಕೋದು ಕಷ್ಟ ಎಂದು ವೈದ್ಯರು ಹೇಳುತ್ತಿದ್ದಂತೆಯೇ ಆಕೆಯ ಕೊನೆಯ ಆಸೆಯ ಪ್ರಕಾರ ತನ್ನ ನೆಚ್ಚಿನ ನಟ ದರ್ಶನ್ ರನ್ನು ಮೀಟ್ ಮಾಡಿಸಿದ್ದರು. ಆದರೆ ನಿನ್ನೆ ಈ ಪುಟ್ಟ ಬಾಲಕಿ ಕೊನೆಯುಸಿರೆಳೆದಿದ್ದಾರೆ.

ಕೊನೆಯುಸಿರೆಳೆದ ಬಾಲಕಿ
ಹೃದಯ ಸಂಬಂಧಿ ಕಾಯಿಲೆ ಸಮಸ್ಯೆಯಿಂದ ಬಳಲುತ್ತಿದ್ದ ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಪಣ್ಣೆದೊಡ್ಡಿ ಗ್ರಾಮದ ನಿವಾಸಿ ಪೂರ್ವಿಕಾ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾಳೆ. ದರ್ಶನ್ ಈ ಹಿಂದೆ ಪೂರ್ವಿಕಾಳ ಚಿಕಿತ್ಸೆಗೆ ಹಣ ನೀಡಿದ್ದರು. ಅಲ್ಲದೇ ಆಕೆಯ ಜನ್ಮ ದಿನದಂದು ಖುದ್ದಾಗಿ ಭೇಟಿಯಾಗಿ ಶುಭಾಶಯ ತಿಳಿಸಿದ್ದರು.

ಪೂರ್ವಿಕಾ ಹುಟ್ಟುಹಬ್ಬ ದಿನದಂದು ದರ್ಶನ್ ಕೇಕ್ ಕತ್ತರಿಸಿ ಜನ್ಮದಿನದ ಶುಭಾಶಯ ತಿಳಿಸಿದ್ದರು. ಆದರೆ ಇದೀಗ ಈ ಪುಟ್ಟ ಬಾಲಕಿ ಇನ್ನು ಮುಂದೆ ನೆನಪು ಮಾತ್ರ.