Recent Posts

Sunday, January 19, 2025
ಸುದ್ದಿ

ಸುಮಲತಾ ಬಗ್ಗೆ ರೇವಣ್ಣ ಅವರು ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ – ಕಹಳೆ ನ್ಯೂಸ್

ಮಂಗಳೂರು: ಸುಮಲತಾ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡಿದ ಸಚಿವ ರೇವಣ್ಣ ಅವರು ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕು ಮತ್ತು ಹೇಳಿಕೆ ವಾಪಾಸ್ ಪಡೆಯಬೇಕು ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು, ಸುಮಲತಾ ಕನ್ನಡದ ಮಗಳು, ಕನ್ನಡದ ಸೊಸೆ. ಅವರು ತನ್ನ ರಾಜ್ಯ ಕರ್ನಾಟಕ ಎಂದು ಭಾವಿಸಿದವರು ಎಂದರು. ಅಂಬರೀಶ್ ನಿಧನರಾದಾಗ ರೇವಣ್ಣ ಅವರು ನಡೆದುಕೊಂಡ ರೀತಿ ಮೊಸಳೆ ಕಣ್ಣೀರ ಎಂದು ಪ್ರಶ್ನಿಸಿದ ಶೋಭಾ ಅವರು, ರೇವಣ್ಣ ಹೇಳಿಕೆ ಸುಮಲತಾ ಮಾತ್ರ ಅಲ್ಲ ಇಡೀ ರಾಜ್ಯದ ಮಹಿಳೆಯರಿಗೆ ನೋವು ತಂದಿದೆ. ವಿಧವೆಯಾದರೆ ತಲೆ ಬೋಳಿಸಿ ಮನೆಯಲ್ಲಿ ಕೂರಬೇಕಾ? ಯಾವ ಶತಮಾನದಲ್ಲಿ ಇದ್ದೀರಿ ಎಂದು ಪ್ರಶ್ನಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಡ್ಯ, ಹಾಸನ ಬಿಜೆಪಿ ಸೋಲುವ ಕ್ಷೇತ್ರ?
ಉಡುಪಿ, ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡದಲ್ಲಿ ಬಿಜೆಪಿ ಸಂಸದರ ಬದಲಿಗೆ ಬೇರೆಯವರಿಗೆ ಟಿಕೆಟ್ ನೀಡಬೇಕೆಂಬ ಬೇಡಿಕೆಯ ಬಗ್ಗೆ ಉತ್ತರಿಸಿದ ಶೋಭ ಕರಂದ್ಲಾಜೆ ಎಲ್ಲರಿಗೂ ಗೆಲ್ಲುವ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಆಪೇಕ್ಷೆ ಇರುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸೋಲುವ ಕ್ಷೇತ್ರ ಯಾರು ಕೇಳುವುದಿಲ್ಲ. ಮಂಡ್ಯ , ಹಾಸನದಲ್ಲಿ ಟಿಕೆಟ್ ಯಾರು ಕೇಳುವುದಿಲ್ಲ ಎಂದು ಹೇಳಿಕೆ ನೀಡುವ ಮೂಲಕ ಹಾಸನ , ಮಂಡ್ಯದಲ್ಲಿ ಬಿಜೆಪಿ ಸೋಲುತ್ತೆ ಎಂಬ ಮಾಹಿತಿಯನ್ನು ಹೊರಹಾಕಿದರು.