ಶಿರಸಿ:ಸೆಲ್ಫಿ ಹುಚ್ಚಿಗೆ ಮೂರು ಜೀವಗಳು ಬಲಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದ ಬುರುಡೆ ಫಾಲ್ಸ್‍ನಲ್ಲಿ ನಡೆದಿದೆ. ಪ್ರವಾಸಕ್ಕೆ ತೆರಳಿದ್ದ ಯುವಕರು ಫಾಲ್ಸ್‍ನಲ್ಲಿ ಸೆಲ್ಫಿ ಕ್ಲಿಕ್ಕಿಸಲು ಹೋಗಿ ನೀರಿನಲ್ಲಿ ಮುಳುಗಿ ಸಾವು ಕಂಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಮೂಲದ ಅಭಿಶೇಖ್ ನಾಯ್ಕ್, ಶಿರಸಿ ಮೂಲದ ಮುರಳಿ, ಕೇರಳ ಮೂಲದ ವಿದ್ಯಾರ್ಥಿ ಸಾಯಿ ಎನ್ನುವರು ಸೆಲ್ಫಿ ಹುಚ್ಚಿಗೆ ಬಲಿಯಾಗಿದ್ದಾರೆ. ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.