Sunday, January 19, 2025
ಸುದ್ದಿ

ಪುತ್ತೂರು ಭಜರಂಗದಳ ಕಾರ್ಯಕರ್ತರಿಂದ ಡ್ರೈನೆಜ್‍ಗೆ ಬಿದ್ದ ಗೋವಿನ ರಕ್ಷಣೆ – ಕಹಳೆ ನ್ಯೂಸ್

ಪುತ್ತೂರು: ಸರಕಾರಿ ಆಸ್ಪತ್ರೆಯ ಹಿಂಭಾಗದ ಡ್ರೈನೆಜ್‍ಗೆ ಗೋವೊಂದು ಬಿದ್ದು 2ದಿನ ಕಳೆದಿತ್ತು, ಇದನ್ನು ಸ್ಥಳೀಯ ಸಾರ್ವಜನಿಕರು ಗಮನಿಸಿ ಪುತ್ತೂರು ಭಜರಂಗದಳದ ಕಾರ್ಯಕರ್ತರಿಗೆ ಮಾಹಿತಿ ನೀಡಿದರು. ತಕ್ಷಣ ಭಜರಂಗಳ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ಧರಿತ್ರಿ ಅರ್ಥ್ ಮೂವರ್ಸ್ ಹಿಟಾಚ್‍ನ ಸಹಾಯದ ಮೂಲಕ ಮೇಲಕ್ಕೆತ್ತಿ ಗೋವನ್ನು ರಕ್ಷಣೆ ಮಾಡಲಾಯಿತು.

ಈ ಸಂದರ್ಭ ಭಜರಂಗದಳ ಪ್ರಖಂಡ ಮಾಜಿ ಅಧ್ಯಕ್ಷ ಅನಿಲ್ ತೆಂಕಿಲ, ಭಜರಂಗದಳ ಜಿಲ್ಲಾ ಪ್ರಮುಖ್ ಧನ್ಯಕುಮಾರ್ ಬೆಳಂದೂರು, ಪ್ರಖಂಡ ಭಜರಂಗದಳ ಸಹ ಸಂಚಾಲಕ್ ಹರೀಶ್ ದೋಳ್ಪಾಡಿ, ಜಿತೇಶ್ ಬಲ್ನಾಡು, ಮಿತುನ್ ತೆಂಕಿಲ, ವಕೀಲ ಗಿರೀಶ್ ಮಲ್ಯ, ಹಾಗೂ ಸ್ಥಳಿಯರು ಸಹಕರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ರಕ್ಷಣೆ ಮಾಡಿದ ಗೋಮಾತೆಯನ್ನು ಪುತ್ತೂರು ವಿ.ಎಚ್.ಪಿ ಕಾರ್ಯಾಲಯದಲ್ಲಿ ಬಿಡಲಾಗಿದೆ. ವಾರಿಸುದಾರರು ಇದ್ದಲ್ಲಿ ಸಂಪರ್ಕಿಸಬಹುದು ಎಂದು ಭಜರಂಗದಳ ಮುಖಂಡರಾದ ಧನ್ಯಕುಮಾರ್ ಬೆಳಂದೂರು ತಿಳಿಸಿರುತ್ತಾರೆ

ಜಾಹೀರಾತು
ಜಾಹೀರಾತು
ಜಾಹೀರಾತು