Recent Posts

Sunday, January 19, 2025
ಸುದ್ದಿ

ಅವಕಾಶಗಳನ್ನು ಬಳಸಿಕೊಂಡು ಪ್ರತಿಭೆಯನ್ನು ಬೆಳೆಸಿ: ತನ್ವಿ ಜಗದೀಶ್ – ಕಹಳೆ ನ್ಯೂಸ್

ಪುತ್ತೂರು: ಕಾಲೇಜು ದಿನಗಳು ಸುವರ್ಣ ದಿನಗಳು. ಕಾಲೇಜು ಜೀವನ ನೀಡುವ ಅವಕಾಶಗಳು ಬಹಳ. ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಅದರಿಂದಾಗಿ ನಮ್ಮ ಪ್ರತಿಭೆ ಹಾಗೂ ವ್ಯಕ್ತಿತ್ವವನ್ನು ಬೆಳೆಸಲು ಸಾಧ್ಯ. ಭಾಗವಹಿಸುವಿಕೆ ಬಹಳ ಮುಖ್ಯ ಎಂದು ದೇಶದ ಪ್ರಥಮ ಮಹಿಳಾ ಸ್ಟಾ್ಯಂಡ್ ಅಪ್ ಪೆಡಲಿಂಗ್ ಕ್ರೀಡಾಪಟು ತನ್ವಿ ಜಗದೀಶ್ ಹೇಳಿದರು.

ಅವರು ವಿವೇಕಾನಂದ ಮಹಾವಿದ್ಯಾಲಯದ ವಿಜ್ಞಾನ ಸಂಘದ ಆಶ್ರಯದಲ್ಲಿ ‘ಯೂತ್ ಫೋರಂ’ ಅನ್ನು ಉದ್ಘಾಟಿಸಿ ಗುರುವಾರ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವರ್ಷಗಳ ಹಿಂದೆ ಕಲಿಯುತ್ತಿದವರಿಗೆ ಇಂದಿನಷ್ಟು ಅವಕಾಶಗಳಿರಲಿಲ್ಲ. ಆದರೂ ಅವರು ಸಿಕ್ಕ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡರು ಮಿಂಚುತ್ತಿದ್ದರು. ಆದರೆ ಇಂದು ಅವಕಾಶಗಳು ಹೇರಳವಾಗಿದ್ದರೂ ಬಳಸಿಕೊಳ್ಳುವವರು ಕಡಿಮೆಯಾಗಿದ್ದಾರೆ. ಅದಕ್ಕೆ ಪ್ರಮುಖ ಕಾರಣ ಆತ್ಮವಿಶ್ವಾಸದ ಕೊರತೆ. ಯಶಸ್ಸಿನ ಹಾದಿಗೆ ಆತ್ಮವಿಶ್ವಾಸ ಮೊದಲ ಹೆಜ್ಜೆ ಎಂದು ಅಭಿಪ್ರಾಯಪಟ್ಟರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಜ್ಞಾನ ಸಂಘದ ಸಂಯೋಜಕ ಪ್ರೊ. ಶಿವಪ್ರಸಾದ್ ಭಟ್ ಮಾತನಾಡಿ, ಇಂದಿನ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸದ ಕೊರತೆ ಹೆಚ್ಚಾಗಿ ಎದ್ದು ಕಾಣುತ್ತಿದೆ. ಅದನ್ನು ಮೀರಿ ವಿದ್ಯಾರ್ಥಿಗಳು ಬೆಳೆಯಬೇಕು. ಅವರ ಪ್ರತಿಭೆಗೆ ಯೂತ್‌ಫೋರಂ ವೇದಿಕೆಯಾಗಲಿದೆ ಎಂದು ತಿಳಿಸಿದರು.

ಕಾಲೇಜಿನ ಪ್ರಾಚಾರ್ಯ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂಜರಿಕೆಯಿಂದಾಗಿ ವಿದ್ಯಾರ್ಥಿಗಳು ಅನೇಕ ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ. ತಮ್ಮದೇ ಸಹಪಾಠಿಯ ಯಶೋಗಾಥೆಯನ್ನು ಕೇಳುವುದರಿಂದ ಅವರ ಆತ್ಮವಿಶ್ವಾಸ ಹೆಚ್ಚುತ್ತದೆ.

ಈ ಸೋಲು-ಗೆಲುವಿನ ಹಾದಿಯಲ್ಲಿ ದೊರೆತ ಅನುಭವಗಳನ್ನು ವಿನಿಮಯ ಮಾಡಿಕೊಂಡಾಗ, ನಮ್ಮೊಳಗಿನ ಪ್ರಪಂಚ ವಿಸ್ತರಿಸುತ್ತದೆ. ಮಾಡಿದ ತಪ್ಪನ್ನು ಪುನರಾವರ್ತನೆ ಆಗಬಾರದೆಂದು ವಿವೇಕ ಎಚ್ಚೆತ್ತುಕೊಳ್ಳುತ್ತದೆ ಎಂದು ನುಡಿದರು.

ಈ ಸಂದರ್ಭ ಯೂತ್‌ಫೋರಂನ ರುವಾರಿ, ಪ್ರಾಧ್ಯಾಪಕ ಶ್ರೀಶ, ವಿಜ್ಞಾನ ಸಂಘದ ಕಾರ್ಯದರ್ಶಿ ಶ್ರೀಕಾಂತ್ ಉಪಸ್ಥಿತರಿದ್ದರು. ವಿಜ್ಞಾನ ಸಂಘದ ಅಧ್ಯಕ್ಷ ನಿಕೇತ್ ಸ್ವಾಗತಿಸಿ, ಸದಸ್ಯ ಹೇಮಂತ್ ಶೆಟ್ಟಿ ವಂದಿಸಿದರು. ವಿದ್ಯಾರ್ಥಿನಿ ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು.