Recent Posts

Sunday, January 19, 2025
ಸುದ್ದಿ

ಓದಿನಲ್ಲಿ ಆಸಕ್ತಿಯನ್ನು ಮೈಗೂಡಿಸಿಕೊಳ್ಳಿ: ಪ್ರೊ. ಶಂಕರ ನಾರಾಯಣ ಭಟ್ – ಕಹಳೆ ನ್ಯೂಸ್

ಪುತ್ತೂರು: ಬದಲಾವಣೆ ಜತೆಗೆ ನಾವು ಬದಲಾಗಬೇಕಾದ ಆವಶ್ಯಕತೆ ಇದೆ. ಪ್ರಸ್ತುತ ಜೀವನಕ್ಕೆ ಜ್ಞಾನದ ಜತೆಗೆ ತಾಂತ್ರಿಕ ಜ್ಞಾನದ ಅರಿವು ಅಗತ್ಯ. ವಿದ್ಯಾರ್ಥಿಗಳಲ್ಲಿ ಶಿಕ್ಷಣ ಅಥವ ಓದಿನ ಕುರಿತು ಆಸಕ್ತಿಯನ್ನು ಬೆಳೆಸಬೇಕು. ಅದು ಹೇಗೆಂದರೆ ಶಿಕ್ಷಣ ಅಥವ ಅಧ್ಯಯನವನ್ನು ಪ್ರೀತಿಸುವ ಗುಣ ಹಾಗೂ ಓದಿನ ಆಸಕ್ತಿಯನ್ನು ಮೈಗೂಡಿಸಿಕೊಂಡು ಹೆಚ್ಚಿನ ಜ್ಞಾನವನ್ನು ಪಡೆದು ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು ಎಂದು ವಿವೇಕಾನಂದ ಕಾಲೇಜಿನ ಗಣಿತ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಶಂಕರ ನಾರಾಯಣ ಭಟ್ ಹೇಳಿದರು.

ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ಪದವಿ ವಾಣಿಜ್ಯ ವಿಭಾಗದ ವತಿಯಿಂದ ಇತ್ತೀಚೆಗೆ ನಡೆದ ಮಾರ್ಗ್ ಇಆರ್‌ಪಿ-೯ ಪ್ಲಸ್ ಸಾಫ್ಟ್ವೇರ್ ಕುರಿತ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ನಾತಕೋತ್ತರ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ವಿಜಯ ಸರಸ್ವತಿ ಮಾತನಾಡಿ, ಸ್ನಾತಕೋತ್ತರ ಪದವಿ ಅಧ್ಯಯನವು ಹೆಚ್ಚಿನ ಜ್ಞಾನವನ್ನು ನೀಡುವುದರ ಜತೆಗೆ ವಿದ್ಯಾರ್ಥಿಗಳು ಶಿಕ್ಷಣದ ಬಳಿಕ ಉದ್ಯೋಗವನ್ನು ಪಡೆಯಲು ಸಹಕಾರಿಯಾಗಲಿದೆ. ಹಾಗಾಗಿ ಕಾಲೇಜು ಹಾಗೂ ವಿಭಾಗಗಳು ವಿದ್ಯಾರ್ಥಿಗಳ ಜ್ಞಾನವನ್ನು ವೃದ್ಧಿಗೊಳಿಸುವ ದೃಷ್ಟಿಯಲ್ಲಿ ಇಂತಹ ತರಬೇತಿ ಕಾರ್ಯಕ್ರಮಗಳು ಪೂರಕ ಎಂದು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಂಗಳೂರಿನ ಪ್ರಣಮ್ಯಾ ಇನ್ಫೋ ಟೆಕ್ ಸಂಸ್ಥೆ ನಿರ್ದೇಶಕ ಪ್ರಕಾಶ್ ಡಿ.ಜಿ. ತರಬೇತಿ ಕಾರ್ಯಾಗಾರವನ್ನು ನಡೆಸಿಕೊಟ್ಟರು.

ದರ್ಬೆ ಅಮೃತ ಸಂಸ್ಥೆಯ ಕಾವ್ಯ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅಶೋಕ ಪ್ರಾರ್ಥಿಸಿದರು. ಪ್ರತಿಮಾ ಸ್ವಾಗತಿಸಿದರು. ಅಶ್ವಿನಿ ಕೆ. ವಂದಿಸಿದರು. ರವಿ ರಮಾನಾಥ ಕಾರ್ಯಕ್ರಮ ನಿರೂಪಿಸಿದರು.