Recent Posts

Monday, January 20, 2025
ಸುದ್ದಿ

ಬಡಗುತಿಟ್ಟು ಯಕ್ಷಗಾನದ ಹೆಸರಾಂತ ಕಲಾವಿದರೊಬ್ಬರು ವೇದಿಕೆಯಲ್ಲೇ ಕುಸಿದು ಹೃದಯಾಘಾತದಿಂದ ಸಾವು – ಕಹಳೆ ನ್ಯೂಸ್

ಉಡುಪಿ: ಯಕ್ಷಗಾನ ಕಲಾವಿದರೊಬ್ಬರು ವೇದಿಕೆಯಲ್ಲೇ ಕುಸಿದು ಮೃತಪಟ್ಟ ಘಟನೆ ಬೈಂದೂರಿನ ಜೋಗಿಬೆಟ್ಟು ಗ್ರಾಮದಲ್ಲಿ ರವಿವಾರ ರಾತ್ರಿ ನಡೆದಿದೆ.

ಹುಡಗೋಡು ಚಂದ್ರಹಾಸ(52) ಮೃತಪಟ್ಟ ಕಲಾವಿದರಾಗಿದ್ದಾರೆ. ಇವರು ಉತ್ತರ ಕನ್ನಡ ಮೂಲದ ಬಡಗುತಿಟ್ಟು ಯಕ್ಷಗಾನದ ಹೆಸರಾಂತ ಕಲಾವಿದರಾಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜೋಗಿಬೆಟ್ಟುವಿನಲ್ಲಿ ಇವರು ಜಲವಳ್ಳಿ ಮೇಳದ ವತಿಯಿಂದ ನಡೆಯುತ್ತಿದ್ದ ಯಕ್ಷಗಾನದಲ್ಲಿ ಸಾಲ್ವನ ಪಾತ್ರ ನಿರ್ವಹಿಸುತ್ತಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂಭಾಷಣೆ ಮುಗಿಸಿ ಕುಣಿತ ಆರಂಭಿಸುತ್ತಿದ್ದಂತೆ ಚಂದ್ರಹಾಸ ಕುಸಿದು ಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲೇ ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು.