ನಿರ್ಣಾಯಕ ಸವಾಲು ಎದುರಿಸಲು ಪ್ಯಾರಾ ಬ್ರಿಗೇಡ್ ಪೂರ್ಣ ಪ್ರಮಾಣದಲ್ಲಿ ಸಿದ್ಧವಾಗಿರಬೇಕು: ಬಿಪಿನ್ ರಾವತ್ – ಕಹಳೆ ನ್ಯೂಸ್
ಹೊಸದಿಲ್ಲಿ: ಶತ್ರುಗಳಿಂದ ಯಾವುದೇ ಸಂದರ್ಭದಲ್ಲಿ ಎದುರಾಗಬಹುದಾದ ನಿರ್ಣಾಯಕ ಸವಾಲುಗಳನ್ನು ಎದುರಿಸುವುದಕ್ಕೆ ಪ್ಯಾರಾ ಬ್ರಿಗೇಡ್ ಪೂರ್ಣ ಪ್ರಮಾಣದಲ್ಲಿ ಸಿದ್ಧವಾಗಿರಬೇಕು ಎಂದು ದೇಶದ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿರುವುದಾಗಿ ಸೇನಾ ವಕ್ತಾರ ತಿಳಿಸಿದ್ದಾರೆ.
ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ತಮ್ಮ ಭೇಟಿಯ ವೇಳೆ, ದೇಶದ ಪ್ಯಾರಾ ಬ್ರಿಗೇಡ್ ನ ಕಾಯಾರಚರಣೆ ಸನ್ನದ್ಧತೆಯನ್ನು ಪರಿಶೀಲಿಸಿದರು ಎಂದು ಸೇನೆಯ ಸಾರ್ವಜನಿಕ ಸಂಬಂಧಗಳ ಅಧಿಕಾರಿ ಕರ್ನಲ್ ಮೋಹಿತ್ ವೈಷ್ಣವ ಹೇಳಿದರು.
ಯಾವುದೇ ಹೊತ್ತಿನಲ್ಲಿ ಶತ್ರುಗಳಿಂದ ಉದ್ಭವಗೊಳ್ಳುವ ಸಂಭವನೀಯ ಮತ್ತು ನಿರ್ಣಾಯಕ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸುವ ದಿಶೆಯಲ್ಲಿ ಪ್ಯಾರಾ ಬ್ರಿಗೇಡ್ ಪೂರ್ಣ ಪ್ರಮಾಣದಲ್ಲಿ ಸಿದ್ಧವಾಗಿರಬೇಕು ಎಂದು ಜನರಲ್ ರಾವತ್ ಎಚ್ಚರಿಸಿರುವುದಾಗಿ ಆರ್ಮಿ ಪಿಆರ್‌ಓ ಹೇಳಿದರು.
ಪ್ಯಾರಾ ಬ್ರಿಗೇಡ್ ಸಂಪೂರ್ಣವಾಗಿ ವೈಮಾನಿಕ ಬ್ರಿಗೆಡ್ ಆಗಿದದ್ದು ಸಂಭವನೀಯ ಕಾರ್ಯಾಚರಣೆಯ ಸಂದರ್ಭದಲ್ಲಿ ಇವುಗಳ ಪಾತ್ರ ಅತ್ಯಂತ ನಿರ್ಣಾಯಕವಾಗಿರುತ್ತದೆ ಎಂದು ಜನರಲ್ ರಾವತ್ ಹೇಳಿದರು.