ಪುತ್ತೂರು: ತಾಲೂಕಿನ ಬಲ್ನಾಡು ಗ್ರಾಮದ ಉಜುರುಪಾದೆ ಎಂಬಲ್ಲಿ ಭೂತ ಬಂಗಲೆ ಯಂತಹ ಮನೆಯಲ್ಲಿ ಕತ್ತಲೆಯ ವಾತಾವರಣದಲ್ಲಿ ಕರಾಳ ಬದುಕಿನ ಜೀವನ ನಡೆಸುತ್ತಿರುವ ಐದು ಮಕ್ಕಳ ಒಂಟಿ ತಾಯಿಯ ಪರಿಸ್ಥಿತಿಯನ್ನು ಕಂಡು ಎಚ್ಚೇತ್ತು ಕೊಂಡ .ದ.ಕ.ಜಿಲ್ಲಾ ಮರಾಟಿ ಸಮಾಜ ಸಂಘದ ಸದಸ್ಯರು ಅವರ ಮನೆಗೆ ಹಲವು ಭಾರಿ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿ ತನ್ನ ಎಲ್ಲಾ ಆಸ್ತಿ ಪತ್ರವನ್ನು ಪರಿಶೀಲನೆ ಮಾಡಿದಾಗ ಲಕ್ಷಾಧೀಪತಿ ತಾಯಿಯ ಭಿಕ್ಷೆ ಬೇಡುವ ಪರಿಸ್ಥಿತಿ ಕೆಲವು ನಿಗೂಡ ಮಾಹಿತಿಗಳು ಬೆಳಕಿಗೆ ಬಂತು .
ಇದರ ಬೆನ್ನು ಹತ್ತಿದ ದ.ಕ ಜಿಲ್ಲಾ ಮರಾಟಿ ಸಮಾಜ ಸಂಘ ,ನಂತರ ಈಗ ದ.ಕ.ಜಿ.ಮ.ಸ.ಸಂಘದ ಪುತ್ತೂರು ತಾಲೂಕಿನ ಘಟಕವು ಆಶೋಕ್ ಅವರ ಅಧ್ಯಕ್ಷ ತೆಯಲ್ಲಿ ಶ್ರಮದಾನದ ಮುಖಾಂತರ ತಾಯಿಯ ಸುಂದರ ಜೀವನಕ್ಕೆ ಆಸರೆಯಾಗಿದೆ.