Sunday, November 24, 2024
ಸುದ್ದಿ

ಕಾಡುಕುರಿ ಬೇಟ: ಮಾಂಸ, ನಾಡ ಬಂದೂಕು ಸಮೇತ ಒವ೯ನ ಬಂಧನ – ಕಹಳೆ ನ್ಯೂಸ್

ಚಾಮರಾಜನಗರ: ಹನೂರು ಸಮೀದ ಜಾಗೇರಿಯ ಶಿಲುವೖಪುರ ಗ್ರಾಮ ನಿವಾಸಿ ಅರಣ್ಯ ಪ್ರದೇಶದಲ್ಲಿ ಮಾಂಸಕ್ಕಾಗಿ ಕಾಡುಕುರಿ (ಕೂಂಡಗುರಿ)ಯನ್ನು ಬೇಟೆಯಾಡಿ ಕೊಂದ ಮಾಂಸವನ್ನು ನಾಡ ಬಂದೂಕು ಸಮೇತ ಗಸ್ತಿನಲಿಂದ ಕೋಳ್ಳೇಗಾಲ ಬಫರ್ ಅರಣ್ಯ ಅಧಿಕಾರಿಗಳು ಭಾನುವಾರ ಬಂಧಿಸಿದ್ದಾರೆ.

ಜಾಗೇರಿಯ ಶಿಲುವೖಪುರ ಗ್ರಾಮ ನಿವಾಸಿ ಜಾನ್ ಬಾಸ್ಕೂ (24) ಬಂಧಿತ ಅರೋಪಿ ಈತನೊಂದಿಗೆ ಜೊತೆಯಾಗಿದ್ದ ಅದೇ ಗ್ರಾಮದ ಕುಮಾರ ಮತ್ತು ಸೆಲುವ ಇವರೆ ತಲೆಮಾರಿಸಿಕೊಂಡ ಅರೋಪಿಗಳು. ಇವರುಗಳು ಶನಿವಾರ ತಡರಾತ್ರಿ
ಶಿಲುವೖಪುರದ ಅರಣ್ಯ ಪ್ರದೇಶ ಪ್ರವೇಶಿಸಿ ನಾಡ ಬಂದೂಕುನಿಂದ ಕಾಡುಕುರಿ ಕೊಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವೇಳೆ ಬಂದೂಕಿನ ಶಬ್ದ ಕೇಳಿದ ಅರಣ್ಯಇಲಾಖೆ ಉಪ ಅರಣ್ಯಾಧಿಕಾರಿ ಶಿವಕುಮಾರ್ ಗಾರ್ಡ್ ಗಳಾದ ಮಾಹನಂದ ಕೃಷ್ಣಪ್ಪ ಈಶ್ವರ್ ಸೇರಿ ಭಾನುವಾರ ಮುಂಜಾನೆ ಕೆಲವು ಅರೋಪಿಗಳ ಮೇಲೆ ಅನುಮಾನಗೂಳ್ಳ ತೊಡಗಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅನುಮಾನದ ಮೇರೆಗೆ ಜಾನ್ ಭಾಸ್ಕೂ ಮನೆ ಮೇಲೆ ದಾಳಿ ನಡೆಸಿದಾಗ 8.5 ಕೆ ಜಿ ಕಾಡುಕುರಿ ಮಾಂಸ ಪತ್ತೆಯಾಗಿದ್ದು ನಾಡ ಬಂದೂಕು ವಶಪಡಿಸಿಕೊಂಡು ವಿಚಾರಣೆಗೆ ಒಳಪಡಿಸಿದ ವೇಳೆ ಬಾಸ್ಕೂ ಅರಣ್ಯ ಅಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ.

8.5 ಕಾಡಕುರಿ ಮಾಂಸ ನಾಡ ಬಂದೂಕು ವಶಪಡಿಸಿಕೂಂಡಿದ್ದು ಮೂವರ ವಿರುದ್ದ ಪ್ರಕರಣ ದಾಖಲಿಸಲಾಗಿದ್ದು ಅರೋಪಿ ಜಾನ್ ಭಾಸ್ಕೂ ನನ್ನು ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮುಂದಿನ ತನಿಖೆ ಎ ಸಿ ಎಪ್ ವನಿತ ರವರು ಮುಂದುವರಿಸಲಿದ್ದಾರೆ ಎಂದು ಕೋಳ್ಳೆಗಾಲ ಬಫರ್ ಅರಣ್ಯ ಅಧಿಕಾರಿ ಮಹಾದೇವಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.