Monday, November 25, 2024
ಸುದ್ದಿ

ಅರಣ್ಯ ಹಕ್ಕು ಕಾಯ್ದೆಯ ಶೀಘ್ರ ಅನುಷ್ಠಾನವೆ ಪರಿಹಾರ: ಹರೀಶ್ ಪೂಂಜ – ಕಹಳೆ ನ್ಯೂಸ್

ಬೆಳ್ತಂಗಡಿ: ಅರಣ್ಯ ಹಕ್ಕು ಕಾಯ್ದೆ ಜಾರಿಯಾಗಿ 13 ವರ್ಷಗಳಾದರೂ ಕೂಡ ನೈಜ ಫಲಾನುಭವಿಗಳಿಗೆ ಹಕ್ಕುಪತ್ರ ಸಿಗದೆ ಇರುವುದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಮಾಹಿತಿಯ ಕೊರತೆಯೆ ಕಾರಣ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಕಿನ್ಯಮ್ಮ ಯಾನೆ ಗುಣವತಿ ಅಮ್ಮ ಸಭಾ ಮಂಟಪದಲ್ಲಿ ನಡೆದ ಅರಣ್ಯ ಹಕ್ಕು ಕಾಯ್ದೆಯ ಮಾಹಿತಿ ಕಾರ್ಯಾಗಾರ ಮತ್ತು ಅರಣ್ಯ ವಾಸಿಗಳೊಂದಿಗೆ ಸಮಾಲೋಚನಾ ಸಭೆಯಲ್ಲಿ ಮಾತನಾಡುತ್ತಾ, ಸಾಮುದಾಯಿಕ ಹಕ್ಕುಗಳನ್ನು ಪಡೆಯಲು ಅರ್ಜಿ ಸಲ್ಲಿಸಿದಾಗ ಕಡತವನ್ನು ಅರಣ್ಯ ಇಲಾಖೆ ಅರಣ್ಯ ಭವನಕ್ಕೆ ಕಳುಹಿಸುವುದಾದರೆ ಅರಣ್ಯ ಹಕ್ಕು ಸಮಿತಿಯ ಅಧಿಕಾರ ವ್ಯಾಪ್ತಿ ಏನು ಎಂದು ಪ್ರಶ್ನಿಸಿದರು. ನೀತಿ ಸಂಹಿತೆ ಮುಗಿದ ತಕ್ಷಣ ನಾವೆಲ್ಲರೂ ಒಟ್ಟಾಗಿ ಈ ಬಗ್ಗೆ ಸೂಕ್ತ ಕ್ರಮ ಗೊಳ್ಳೋಣ, ಯಾವುದೆ ಕುಟುಂಬಗಳಿಗೆ ಅನ್ಯಾಯ ಆಗದಂತೆ ಕಾನೂನಿನ ಚೌಕಟ್ಟಿನಲ್ಲಿ ಪರಿಹಾರ ಕಂಡುಕೊಳ್ಳೋಣ ಎಂದು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಶ್ರೀಧರ್ ಗೌಡ ಈದು ಮಾತನಾಡಿ ಆರಣ್ಯವಾಸಿಗಳಲ್ಲಿ ಭಯದ ವಾತಾವರಣ ನಿರ್ಮಾಣ ಮಾಡುವುದು ಬೇಡ‌. ಅರಣ್ಯ ಹಕ್ಕು ಪತ್ರ ತಿರಸ್ಕಾರ ಆಗಿದ್ದರೂ ಕೂಡ ಇತರ ಜಮೀನು ಇದ್ದಾಗ ಒಕ್ಕಲೆಬ್ಬಿಸಲು ಸಾಧ್ಯ ಇಲ್ಲ , ಅರಣ್ಯ ಜಾಗದಲ್ಲಿ ಹಕ್ಕು ಪತ್ರವು ಇಲ್ಲದೆ ಇತರ ಜಮೀನು ಇಲ್ಲದೆ ಇದ್ದಾಗ ಸಮಸ್ಯೆ ಆಗುತ್ತದೆ ಅಂತಹ ಕುಟುಂಬಗಳು ಕಡಿಮೆ ಪ್ರಮಾಣದಲ್ಲಿ ಇರುವಂತಹದು ಆ ಅರ್ಜಿಗಳನ್ನು ವಿಶೇಷ ಸಭೆ ನಡೆಸಿ ಹಕ್ಕು ಪತ್ರ ನೀಡಬೇಕು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾನೂನಿನ ಚೌಕಟ್ಟಿನಲ್ಲಿ ಹೋರಾಟ ಮಾಡಿರುವ ಪರಿಣಾಮ ಕಾರ್ಕಳ ತಾಲೂಕಿನಲ್ಲಿ ಅರಣ್ಯ ಹಕ್ಕು ಕಾಯ್ದೆ ಪರಿಣಾಮಕಾರಿಯಾಗಿ ಅನುಷ್ಠಾನ ಆಗಿದೆ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಅಶೋಕ್ ಕುಮಾರ್ ಸಮಗ್ರ ಗ್ರಾಮೀಣ ಆಶ್ರಮ ಉಡುಪಿ ಅರಣ್ಯ ಹಕ್ಕು ಕಾಯ್ದೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರೂ. ಅರಣ್ಯ ಹಕ್ಕು ಪತ್ರ ಮಂಜೂರು ಮಾಡಲು ಅಧಿಕಾರ ಇರುವಂತಹದು ಅರಣ್ಯ ಹಕ್ಕು ಸಮಿತಿಗಳಿಗೆ ಹೊರತು ಅರಣ್ಯ ಇಲಾಖೆಗೆ ಅಲ್ಲ, ಗ್ರಾಮ, ಉಪವಿಭಾಗೀಯ, ಮತ್ತು ಜಿಲ್ಲಾ ಮಟ್ಟದ ಸಮಿತಿಗಳು ಸಮನ್ವಯತೆ ಯಿಂದ ಕೆಲಸ ಮಾಡಬೇಕು.

ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಅರ್ಜಿ ಸ್ವೀಕರಿಸಿರುವ ಪ್ರಕ್ರಿಯೆಯೇ ಸರಿಯಾಗಿ ನಡೆದಿಲ್ಲ ಎಂಬ ನಿರ್ಣಯ ಮಾಡಿ ಹೊಸ ಅರ್ಜಿಗಳನ್ನು ಸ್ವೀಕರಿಸಲು ಅವಕಾಶ ಕಲ್ಪಿಸಬಹುದು , ಆನ್ಲೈನ್ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಅರುಣ್ಯ ಹಕ್ಕು ಕಾಯ್ದೆಯಲ್ಲಿ ಇಲ್ಲ ಎಂದು ತಿಳಿಸಿದರು.

ತಜ್ಞರ ವರದಿಯ ಆಧಾರದ ಮೇಲೆ ವನ್ಯ ಜೀವಿಗಳ ಆವಾಸ ಸ್ಥಾನ (critical habbite) ನಲ್ಲಿ ಹೊರತು ಪಡಿಸಿ ಉಳಿದ ಎಲ್ಲಾ ರೀತಿಯ ಅರಣ್ಯಗಳಲ್ಲಿ ಕೂಡ ಹಕ್ಕು ಪತ್ರ ನೀಡಬಹುದು. ಇತರ ಕಂದಾಯ ಜಮೀನು ಇದ್ದರೂ ಕೂಡ ಅರಣ್ಯ ಹಕ್ಕು ಪತ್ರ ನೀಡಬೇಕು ಎಂದು ತಿಳಿಸಿದರು.

ಶ್ರೀನಿವಾಸ್ ಉಜಿರೆ , ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಜಯಂತ್ ಕೋಟ್ಯಾನ್, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ವೇದಾವತಿ , ತಾಲೂಕು ಪಂಚಾಯತ್ ಸದಸ್ಯರಾದ ಸುದೀರ್ ಸುವರ್ಣ, ಕೊರಗಪ್ಪ ಗೌಡ, ಶ್ರೀಮತಿ ವಸಂತಿ, ಅಮಿತಾ, ಧನಲಕ್ಷ್ಮಿ ಜನಾರ್ದನ್, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ರತ್ನ ಶಿಬಾಜೆ, ಕೇಶವ ದಿಡುಪೆ, ಕೃಷಿ ಪತ್ತಿನ ಸಹಕಾರ ಸಂಘ ಧರ್ಮಸ್ಥಳದ ನಿರ್ದೆಶಕರಾದ ಉಮನಾಥ್ ಧರ್ಮಸ್ಥಳ, ಹಾಲು ಉತ್ಪಾದಕರ ಸಹಕಾರ ಸಂಘ ಶಿರ್ಲಾಲು ಇದರ ನಿರ್ದೇಶಕರಾದ ಶೀನಪ್ಪ ಮಲೆಂಕಿಲ ಮೊದಲಾದವರು ಉಪಸ್ಥಿತರಿದ್ದರು. ಹರೀಶ್ ಎಳನೀರ್ ಸ್ವಾಗತಿಸಿ ವಂದಿಸಿದರು.