Thursday, January 23, 2025
ಸುದ್ದಿ

ಫೇಸ್ ಬುಕ್ ಖಾತೆ ಮೂಲಕ ಸೆಳೆದು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿಗಳ ಬಂಧನ- ಕಹಳೆ ನ್ಯೂಸ್

ಚೆನ್ನೈ: ಪೊಲ್ಲಾಚಿಯ ನಾಲ್ಕು ಮಂದಿಯ ತಂಡವೊಂದು ರಾಜ್ಯಾದ್ಯಂತ 50ಕ್ಕೂ ಹೆಚ್ಚು ಮಹಿಳೆಯರನ್ನು ನಕಲಿ ಫೇಸ್ ಬುಕ್ ಖಾತೆಗಳ ಮೂಲಕ ಸೆಳೆದು ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನಲಾದ ಪ್ರಕರಣ ತಮಿಳುನಾಡಿನಾದ್ಯಂತ ಕೋಲಾಹಲ ಸೃಷ್ಟಿಸಿದೆ. ಈ ಪ್ರಕರಣದ ಹಿಂದೆ ಹಿರಿಯ ಎಐಎಡಿಎಂಕೆ ನಾಯಕರ ಪಾತ್ರವಿದೆಯೆಂದು ವಿಪಕ್ಷಗಳು ಆರೋಪಿಸಿವೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ..?
ಕಳೆದ ತಿಂಗಳು ಈ ಪ್ರಕರಣದ ಎಲ್ಲಾ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿದಾಗಲೇ ಈ ಪ್ರಕರಣ ಬೆಳಕಿಗೆ ಬಂದಿತ್ತು. ಆರೋಪಿಗಳೆಲ್ಲರೂ 20 ರ ಅಸುಪಾಸಿನವರಾಗಿದ್ದು, 19 ವರ್ಷದ ಯುವತಿಯನ್ನು ಬ್ಲ್ಯಾಕ್ ಮೇಲ್ ಮಾಡಿ ಲೈಂಗಿಕ ಕಿರುಕುಳ ನೀಡಿದ್ದಕ್ಕಾಗಿ ಅವರನ್ನು ಬಂಧಿಸಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಪಿಗಳು ಎರಡು ವಾರಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದ ನಂತರ ಸೋಮವಾರ ಅವರ ರಿಮಾಂಡ್ ಅವಧಿಯನ್ನು ವಿಸ್ತರಿಸಲಾಗಿದ್ದು, ಅವರಿಂದ ವಶಪಡಿಸಿಕೊಳ್ಳಲಾಗಿರುವ ಮೊಬೈಲ್ ಫೋನುಗಳಲ್ಲಿ ಸುಮಾರು ೫೦ ಮಹಿಳೆಯರ ಚಿತ್ರಗಳಿದ್ದವು ಎಂದು ತನಿಖಾ ತಂಡದ ಭಾಗವಾಗಿರುವ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಪಿಗಳು ಮಹಿಳೆಯರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆಗಳನ್ನು ತೆರೆದು ಹಲವು ಇತರ ಮಹಿಳೆಯರ ಸಂಪರ್ಕ ಸಾಧಿಸಿ ಚಾಟ್ ಮಾಡಿ ನಂತರ ಅವರನ್ನು ಮುಖತಃ ಭೇಟಿಯಾಗಿ ಕಿರುಕುಳ ನೀಡುತ್ತಿದ್ದರು. ಸಂತ್ರಸ್ತೆಯರಲ್ಲಿ ಶಿಕ್ಷಕಿಯರು, ವೈದ್ಯೆಯರು ಹಾಗೂ ವಿದ್ಯಾರ್ಥಿನಿಯರು ಸೇರಿದ್ದಾರೆ.

ಅರೋಪಿಗಳನ್ನ ಬಂಧಿಸಿದ್ದು ಹೇಗೆ..?
ಪ್ರಕರಣದ ಸಂತ್ರಸ್ತೆಯರಲ್ಲೊಬ್ಬಳಾದ 19 ವರ್ಷದ ಕಾಲೇಜು ವಿದ್ಯಾರ್ಥಿನಿಯನ್ನು ಆರೋಪಿಗಳು ಫೆಬ್ರವರಿ 12 ರಂದು ಕಾಲೇಜಿನ ಲಂಚ್ ಬ್ರೇಕ್ ವೇಳೆ ಭೇಟಿಯಾಗಿದ್ದು, ಆಕೆ ಅವರ ಕಾರಿನಲ್ಲಿ ಕುಳಿತ ಕೂಡಲೇ ಆಕೆಗೆ ಕಿರುಕುಳ ನೀಡಿ ಅದರ ವೀಡಿಯೋ ತೆಗೆದು ಬ್ಲ್ಯಾಕ್ ಮೇಲ್ ಮಾಡಿದ್ದರು.

ಆಕೆ ಈ ಬಗ್ಗೆ ತನ್ನ ಕುಟುಂಬದ ಬಳಿ ತಿಳಿಸಿದ ನಂತರ ಆಕೆಯ ಸೋದರ ಆರೋಪಿಗಳನ್ನು ಸಂಪರ್ಕಿಸಿ ವೀಡಿಯೋ ಡಿಲೀಟ್ ಮಾಡಲು ಹೇಳಿದ್ದರೆ ತಂಡವು ಆತನಿಗೆ ಬೆದರಿಕೆಯೊಡ್ಡಿತ್ತು. ಕುಟುಂಬ ನೀಡಿದ ದೂರಿನಂತೆ ನಾಲ್ಕು ಮಂದಿಯನ್ನು ಬಂಧಿಸಲಾಗಿತ್ತು.

ಈ ಬಂಧಿತರ ಪೈಕಿ ಪೊಲ್ಲಾಚಿಯ ಕೆಲ ರಾಜಕೀಯ ಪ್ರಭಾವಿ ವ್ಯಕ್ತಿಗಳಿದ್ದಾರೆನ್ನಲಾಗಿದ್ದು ಅವರು ಮದ್ಯ ಮತ್ತು ಕೇಬಲ್ ಉದ್ಯಮದಲ್ಲಿರುವವರೆಂದು ಪೊಲೀಸರು ತಿಳಿಸಿದ್ದಾರೆ.