Thursday, January 23, 2025
ಸುದ್ದಿ

ನಟ ರವಿಪ್ರಕಾಶ್‌ನನ್ನು ಬಂಧಿಸುವಂತೆ ನಟಿ ವಿಜಯಲಕ್ಷ್ಮಿ ಪಟ್ಟು – ಕಹಳೆ ನ್ಯೂಸ್

ಕಳೆದ ಕೆಲ ದಿನಗಳಿಂದ ನಗರದ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟಿ ವಿಜಯಲಕ್ಷ್ಮಿ, ಸ್ಯಾಂಡಲ್ ವುಡ್ ಸ್ಟಾರ್ ನಟರಿಗೆ ಹಣಕಾಸಿನ ನೆರವು ನೀಡಲು ಮನವಿ ಮಾಡಿಕೊಂಡಿದ್ದರು. ಇದನ್ನು ನೋಡಿ ನಟ ರವಿಪ್ರಕಾಶ್ ಆಸ್ಪತ್ರೆಗೆ ಭೇಟಿ ನೀಡಿ ವಿಜಯಲಕ್ಷ್ಮಿಯವರಿಗೆ ಒಂದು ಲಕ್ಷ ನಗದು ಕೊಟ್ಟಿದ್ದರು. ಇದಾದ ಬಳಿಕ ಕರೆ, ಸಂದೇಶ ಮಾಡಿ ಕಿರುಕುಳ ನೀಡ್ತಿದ್ದರು ಅಂತ ವಿಜಯಲಕ್ಷ್ಮಿ ಪೊಲೀಸರಿಗೆ ದೂರು ಕೊಟ್ಟಿದ್ದರು.

ತಮ್ಮ ಜೊತೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿರುವ ನಟ ರವಿಪ್ರಕಾಶ್‌ರನ್ನು ಬಂಧಿಸುವವರೆಗೂ ತಾವು ಅನ್ನ, ನೀರು ಮುಟ್ಟಲ್ಲ ಅಂತಾ ನಟಿ ವಿಜಯಲಕ್ಷ್ಮಿ ಪಟ್ಟು ಹಿಡಿದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬಗ್ಗೆ ವಿಡಿಯೋ ಒಂದನ್ನು ಮಾಡಿರುವ ಅವರು ‘ತಮಗೇನಾದ್ರೂ ಹೆಚ್ಚು ಕಮ್ಮಿಯಾದ್ರೆ ಅದಕ್ಕೆ ಕಾರಣ ರವಿಪ್ರಕಾಶ್. ಇವರ ಹೇಳಿಕೆಯಿಂದ ನನ್ನ ಇಪ್ಪತ್ತು ವರ್ಷದ ಕೆರಿಯರ್ ಹಾಳಾಗಿದೆ.

ಹೀಗಾಗಿ ರವಿಪ್ರಕಾಶ್ ಬಂಧನವಾಗುವವರೆಗೂ ಅನ್ನ ನೀರು ಮುಟ್ಟಲ್ಲ’ ಅಂತಾ ಹೇಳಿದ್ದಾರೆ. ಇದೇ ವೇಳೆ ಚಲನಚಿತ್ರ ವಾಣಿಜ್ಯ ಮಂಡಳಿ ಸೇರಿದಂತೆ ತಮಗ್ಯಾರು ಸಹಾಯ ಮಾಡ್ತಿಲ್ಲ ಅಂತಾ ಹರಿಹಾಯ್ದಿದ್ದಾರೆ.