Thursday, January 23, 2025
ಸುದ್ದಿ

ಹಿಂದೂ ಸಮಾಜದ ಶಕ್ತಿಯಾಗಿ ಶಾಂತದುರ್ಗೆ ನಿಡ್ಪಳ್ಳಿಯಲ್ಲಿ ನೆಲೆಸಿದ್ದಾಳೆ ; ನಿಡ್ಪಳ್ಳಿ ಬ್ರಹ್ಮಕಲಶೋತ್ಸವದಲ್ಲಿ ವಜ್ರದೇಹಿ ಶ್ರೀ – ಕಹಳೆ ನ್ಯೂಸ್

ನಿಡ್ಪಳ್ಳಿ : ಶ್ರೀ ಶಾಂತದುರ್ಗ ದೇವಸ್ಥಾನ ಮತ್ತು ಶ್ರೀ ಕಿನ್ನಿ ಮಾಣಿ ಪೂಮಾಣಿ ಪರಿವಾರ ದೈವಸ್ಥಾನದ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ ಹಾಗೂ ಜಾತ್ರೋತ್ಸವ ಕಾರ್ಯಕ್ರಮವು ಬಹಳ ಅದ್ದೂರಿಯಿಂದ ನಡೆಯುತ್ತಿದ್ದು ೫ನೇ ದಿನದ ಧಾರ್ಮಿಕ ಸಭೆಯು ಶಶಿಕುಮಾರ್ ರೈ ಬಾಲ್ಯೋಟ್ಟು ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ವಜ್ರದೇಹಿ ಶ್ರೀಗಳು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ದುರ್ಗಿಯನ್ನು ಮಾರ್ಕಂಡಯ್ಯ ಮುನಿಗಳು ಆರಾಧಿಸುತ್ತಿದ್ದರು. ಅಂತಹ ಸಾದು ಸಂತರಿಂದ ಆರಾಧಿಸಲ್ಪಟ್ಟ ಶಕ್ತಿ ಸ್ವರೂಪಿಣಿಯನ್ನು ನಿಡ್ಪಳಿ ಗ್ರಾಮದಲ್ಲಿ ಪ್ರತಿಷ್ಠಾಪಿಸಿ ಬ್ರಹ್ಮಕಲಶೋತ್ಸವ ನಡೆಯುತ್ತಿರುವುದು ಇಲ್ಲಿನ ಜನರ ಸೌಭಾಗ್ಯ. ಶಾಂತದುರ್ಗ ದೇವಿಯ ಆರಾದನೆಯಿಂದ ಇಲ್ಲಿನ ಜನರಿಗೆ ಒಳಿತಗಲಿದೆ. ಎಲ್ಲಿ ಬ್ರಹ್ಮಕಲಶೋತ್ಸವ ನಡೆದರು ಅಶೋಕ್ ರೈಗಳು‌ ಮುಂದೆ ಇರುತ್ತಾರೆ ಅವರ ಸೇವೆ ನಿರಂತರವಾಗಿರಲಿ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಧಾರ್ಮಿಕ ಕ್ಷೇತ್ರಗಳು ಅಭಿವೃದ್ದಿಯಾಗಬೇಕಾದರೆ ಮೂರು ವರ್ಗಗಳು‌ ಕೂಡ ಸಕ್ರೀಯವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಹಲವಾರು ಕಡೆಗಳಲ್ಲಿ ಬ್ರಹ್ಮಕಲಶೋತ್ಸವದವರೆಗೆ ಭಕ್ತರ ಸಂಖ್ಯೆ ಅಧಿಕವಾಗಿರುತ್ತದೆ ತದನಂತರ ಭಕ್ತರ ಸಂಖ್ಯೆ ಕಮ್ಮಿಯಾಗುತ್ತದೆ ಈ ರೀತಿಯಾಗಬಾರದು ಎಂದು ಕರ್ನಾಟಕ ಧಾರ್ಮಿಕ ಪರಿಷತ್ ಅಧ್ಯಕ್ಷ ಜಗನ್ನಿವಾಸ ರಾವ್ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

 

ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸ್ವರ್ಣ ಉದ್ಯಮಿ ಬಲರಾಮ ಆಚಾರ್ಯ ಮಾತನಾಡಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಿಂದೂ ಸಮಾಜದ ಒಗ್ಗುಡಿಸುವಿಕೆಗೆ ಒಂದು ಉತ್ತಮ ವೇದಿಕೆಯಾಗಿದೆ. ಕಾರ್ಯಕರ್ತರ ಸಾಧನೆಯಿಂದ ಇದ್ದೆಲ್ಲ ಸಹಕಾರಿಯಾಗಿದೆ.

ಸಭೆಯಲ್ಲಿ‌ ಗ್ರಾಮದ ದಾನಿಗಳಿಗೆ ವಿಷೇಶವಾಗಿ ಸನ್ಮಾನಿಸಿ ಗೌರವಿಸಲಾಯಿತ್ತು.

ಈ ಸಂದರ್ಭ ವೇದಿಕೆಯಲ್ಲಿ ಅನೇಕ ಗಣ್ಯರು ಉಪಸ್ಥಿತರಿದ್ದರು.