ಬಿಡೆನು ನಿನ್ನ ಪಾದ
ಬಿಡೆನು ಬಿಡೆನು ನಿನ್ನ ಪಾದ ಶ್ರೀ ರಾಮಚಂದ್ರನೆ|
ಕಲಿಯುಗದ ಕಾಮಧೇನು ಶ್ರೀ ರಾಘವೇಶನೆ||
ಶ್ರೀ ರಾಮ ರೂಪ ಸರಿಸಿ ಬಂದ ರಾಘವೇಶ್ವರನೆ|
ಮನುಜರೊಳು ಮಹಿಮನಾಗಿ ಬಂದ ಗುರುವರನೆ||೧||
ರಾಮಮದೇವನ ದಿವ್ಯ ನೆಲದಿ ಪಾದ ಊರಿದೆ|
ಶರಾವತಿಯ ಪುಣ್ಯ ಜಲದಿ ತಪವ ಗೈದುದೆ|| ಹಿಂದೆ ಯಾರೊ ಮುಂದೆಯಾರೊ ಬೆಳಕ ಬೀರಲು|
ಸಾಗುತಿದೆ ಬೆಳಕಿನೆಡೆಗೆ ನೀ ದಾರಿ ತೋರಲು||೨||
ಹಸಿಹಸಿದ ಗೋಪಬಾಲರ ನಗೆಗಡಲೊಳುಳಿಸಿದೆ|
ಮುಸಿ ಮುಸಿ ನಗುವ ಲಲನೆಯರಿಗೆ ನೈದಿಲೆಯಾದೆ||
ಎಳೆಯ ಮಗುವ ತೊಡೆಯೊಳಿರಿಸಿ ಮುದವ ನೀಡಿದೆ|
ಜಗದ ಜನರ ಕಂಬನಿ ಒರಸಿ ಗಾನ ಪಾಡಿದೆ||೩||
ಗೋವು ಜೀವ ದೇವರಹುದು ಬೇಕು ಬದುಕಲು|
ಹಾಲು ಮೊಸರು ಬೆಣ್ಣೆ ತುಪ್ಪ ಜಗಕೆ ಅಮೃತವು||
ವಿದೇಶಿ ಜೀವಜಾಲದಲ್ಲಿ ಕೃಷ್ಣ ಗೀತಾ ಪಾಠವು|
ಭರತಭೂಮಿ ಧರಣಿ ಮಧ್ಯದಿ ದಿವ್ಯ ನೋಟವು||೪||