Friday, January 24, 2025
ಸುದ್ದಿ

ಮೀನುಗಾರರ ನಿರ್ಲಕ್ಷ್ಯ: ಲೋಕಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ತೀರ್ಮಾನ – ಕಹಳೆ ನ್ಯೂಸ್

ಮಲ್ಪೆ: ಸುವರ್ಣ ತ್ರಿಭುಜ ಬೋಟ್ ನಾಪತ್ತೆ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸದೆ ಮೀನುಗಾರರನ್ನು ನಿರ್ಲಕ್ಷಿಸಿದೆ ಎಂದು ನಾಪತ್ತೆಯಾದ ಎರಡೂ ಮೀನುಗಾರರ ಮನೆಯವರು ಆರೋಪಿಸಿದ್ದು, ಲೋಕಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸಲು ತೀರ್ಮಾನಿಸಿದ್ದಾರೆ.

ಮಲ್ಪೆ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ ಸುವರ್ಣ ತ್ರಿಭುಜ ಬೋಟ್ ಸಹಿತ 7 ಮಂದಿ ಮೀನುಗಾರರು ನಾಪತ್ತೆಯಾಗಿ 88 ದಿನಗಳು ಕಳೆದಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜನಪ್ರತಿನಿಧಿಗಳು ಮೀನುಗಾರರ ಮನೆಗೆ ಭೇಟಿ ನೀಡಿದ್ದು ಬಿಟ್ಟರೆ, ಏನಾಗಿದೆ ಎಂದು ಇಲ್ಲಿಯವರೆಗೆ ಯಾವುದೇ ರೀತಿಯ ಮಾಹಿತಿ ನೀಡಿಲ್ಲ ಎಂದು ರಾಜ್ಯ ಮತ್ತು ಕೇಂದ್ರ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಾಪತ್ತೆಯಾದ ಮೀನುಗಾರ ಚಂದ್ರಶೇಖರ ಕೋಟ್ಯಾನ್ ಮತ್ತು ದಾಮೋದರ ಸಾಲ್ಯಾನ್ ಅವರ ಮನೆಯಲ್ಲಿ ಹೆತ್ತವರು ತಮ್ಮ ಮಕ್ಕಳನ್ನು ನೆನೆದು ಈಗಲೂ ಕಣ್ಣೀರಿಡುತ್ತಿದ್ದಾರೆ.

ತಮ್ಮವರ ಗತಿ ಏನಾಗಿದೆ ಎಂಬ ಮಾಹಿತಿ ಸಿಗದೆ ಕುಟುಂಬಗಳು ಅಸಹಾಯಕರಾಗಿ ಹತಾಶೆಯ ಸ್ಥಿತಿ ಅನುಭವಿಸುತ್ತಿದ್ದು, ಬರುವಿಕೆಗಾಗಿ ಇನ್ನೂ ಕಾಯುತ್ತಾ ಕುಳಿತಿದ್ದಾರೆ.