Saturday, January 25, 2025
ಸುದ್ದಿ

ಲೋಕಸಭಾ ಚುನಾವಣೆ: ನಕ್ಸಲ್ ಪೀಡಿತ ಪ್ರದೇಶಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ – ಕಹಳೆ ನ್ಯೂಸ್

ಉಡುಪಿ: ಚಿಕ್ಕಮಗಳೂರು, ಉಡುಪಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾನ ಪ್ರಕ್ರಿಯೆಗಾಗಿ ಹೈ ಅಲರ್ಟ್ ಘೋಷಣೆಯಾಗಿದೆ. ಇಲ್ಲಿ 8 ವಿಧಾನಸಭಾ ಕ್ಷೇತ್ರಗಳ ಪೈಕಿ 5 ಕ್ಷೇತ್ರಗಳು ನಕ್ಸಲ್ ಪೀಡಿತ ಪ್ರದೇಶಗಳಾಗಿವೆ.

ಕ್ಷೇತ್ರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಿದೆ. ಜೊತೆಗೆ ಎ.ಎನ್.ಎಫ್ ಸಿಬ್ಬಂದಿಗಳು, ಪ್ಯಾರಾ ಮಿಲಿಟರ್ ಫೋರ್ಸ್ ಹಾಗೂ ಸ್ಥಳೀಯ ಪೊಲೀಸರು ಶಾಂತಿಯುತ ಮತದಾನಕ್ಕಾಗಿ ಕಾರ್ಯನಿರ್ವಹಿಸ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಚಿಕ್ಕಮಗಳೂರಿನಲ್ಲಿ ಶೃಂಗೇರಿ, ಮೂಡಿಗೆರೆ ಸೇರಿದಂತೆ ಕೊಪ್ಪಾದ ಬಲಿಗೆ, ಬಸರೀಕಟ್ಟೆ, ವಡೇರಮಠ, ಕುದುರೆಮುಖ, ಕಳಸ ಸೇರಿದಂತೆ ಹತ್ತಾರು ಗ್ರಾಮಗಳು ನಕ್ಸಲ್ ಪೀಡಿತ ಪ್ರದೇಶ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರಣದಿಂದ ಇಲ್ಲಿ ಜನರು ವೋಟ್ ಮಾಡೋದು ತುಂಬಾ ಕಮ್ಮಿ. ಹೀಗಾಗಿ ನಕ್ಸಲ್ ಪೀಡಿತ ಪ್ರದೇಶದ ಮೇಲೆ ಜಿಲ್ಲಾಡಳಿತ ಹೆಚ್ಚಿನ ಗಮನ ಹರಿಸಿದೆ. ಸಾರ್ವಜನಿಕರು ಭಯವಿಲ್ಲದೆ ಮತದಾನ ಮಾಡಲು ಜಾಗೃತಿ ಅಭಿಯಾನ ಕೈಗೊಂಡಿದೆ.