Sunday, January 26, 2025
ಸುದ್ದಿ

ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ‘ಮಹಿಳೆ ಮತ್ತು ಕಾನೂನು’ ಅರಿವು ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಂಗಳೂರು, ತಾಲೂಕು ಕಾನೂನು ಸೇವೆಗಳ ಸಮಿತಿ, ಪುತ್ತೂರು, ನ್ಯಾಯವಾದಿಗಳ ಸಂಘ ಪುತ್ತೂರು, ಶಿಕ್ಷಣ ಸಂಪನ್ಮೂಲ ಕೇಂದ್ರ ಪುತ್ತೂರು ಪ್ರಗತಿ ಎಜ್ಯುಕೇಶಲ್ ಫೌಂಡೇಶನ್(ರಿ.) ಪುತ್ತೂರು ಇದರ ಅಧೀನಕ್ಕೆ ಒಳಪಟ್ಟ ಪ್ರಗತಿ ಸ್ಟಡಿ ಸೆಂಟರ್, ಪುತ್ತೂರು, ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಮಹಿಳಾ ದಿನಾಚರಣೆ ಪ್ರಯುಕ್ತ ‘ಮಹಿಳೆ ಮತ್ತು ಕಾನೂನು’ ಅರಿವು ಕಾರ್ಯಕ್ರಮವು ಮಾ. 12ರಂದು ಪುತ್ತೂರಿನ ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ಪುತ್ತೂರು ಪ್ರಗತಿ ಸ್ಟಡಿ ಸೆಂಟರ್ ಪ್ರಾಂಶುಪಾಲರಾದ ಕೆ. ಹೇಮಲತಾ ಗೋಕುಲ್ ಮಾತಾನಾಡಿ, ಮಹಿಳಾ ದಿನಾಚರಣೆ ಪ್ರಯುಕ್ತ ‘ಮಹಿಳೆ ಮತ್ತು ಕಾನೂನು’ ಅರಿವು ಕಾರ್ಯಕ್ರಮವು ನಮ್ಮ ವಿದ್ಯಾರ್ಥಿಗಳಲ್ಲಿ ಕಾನೂನಿನ ವಿಷಯಗಳ ಕುರಿತು ಜಾಗೃತಗೊಳಿಸಿ, ಜ್ಞಾನವನ್ನು ತುಂಬುವಂತಹ ಕೆಲಸವನ್ನು ಮಾಡುತ್ತದೆ. ಕಾರ್ಯಕ್ರಮವನ್ನು ನಮ್ಮ ಸಂಸ್ಥೆಯಲ್ಲಿ ಆಯೋಜಿಸಿದ್ದಾಕ್ಕಾಗಿ ಸಂಯೋಜಕರಿಗೆ ಹೃದಯಸ್ಪರ್ಶಿ ಅಭಿನಂದನೆಗಳನ್ನು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಉದ್ಘಾಟಕರಾಗಿ ಆಗಮಿಸಿದ್ದ ಪುತ್ತೂರು ಗೌರವಾನ್ವಿತ ಹೆಚ್ಚುವರಿ ಹಿರಿಯ ವ್ಯವಹಾರಿಕ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರಾದ ಲತಾದೇವಿ ಜಿ. ಎ ಇವರು ದೀಪ ಬೆಳಗಿಸಿ ಉದ್ಘಾಟಿಸಿ, ಮಾನವಕುಲವನ್ನೇ ಗೌರವಿಸುವಂತಹ ಅತ್ಯುನ್ನತ ಜವಾಬ್ದಾರಿ ನಮ್ಮ ಮೇಲಿದೆ. ಪ್ರಕೃತಿಯಲ್ಲಿ ಗಂಡು ಹೆಚ್ಚು ಅಥವಾ ಹೆಣ್ಣು ಹೆಚ್ಚು ಎಂದು ಮಾಡಿದಾಗ ಪ್ರಕೃತಿ ವಿಕೋಪಕ್ಕೆ ಹೋಗುತ್ತದೆ. ಇದರಲ್ಲಿ ಯಾರು ಹೆಚ್ಚಲ್ಲ, ಇಬ್ಬರೂ ಸಮಾನರು. ದೌರ್ಜನ್ಯಕ್ಕೆ ಒಳಗಾದ ಹೆಣ್ಣು ಮಾನಸಿಕವಾಗಿ ಕುಗ್ಗಿ ಹೋಗುತ್ತಾಳೆ. ಆಗ ಇಡೀ ಸಮಾಜವೇ ಸಮಾತೋಲನವನ್ನು ಕಳೆದುಕೊಳ್ಳುತ್ತದೆ. ಆ ನಿಟ್ಟಿನಲ್ಲಿ ಚಿಂತಿಸಬೇಕಾಗಿದೆ ಎಂದು ನೀಡಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ನ್ಯಾಯವಾದಿ ಹರಿಣಾಕ್ಷಿ ಜೆ ಮಾತನಾಡಿ, ಮಹಿಳೆಯರ ಸಾಧನೆಯ ಕುರಿತು ವಿವರಿಸುತ್ತಾ, ಹೆಣ್ಣು ಅಬಲೆಯಲ್ಲ, ಸಬಲೆ ಮಹಿಳೆಯರು ಮತ್ತು ಹೆಣ್ಣುಮಕ್ಕಳು ಕಾನೂನಿನ ಅರಿವನ್ನು ಅರಿತುಕೊಳ್ಳಬೇಕಾಗಿದೆ ಎಲ್ಲಿ ಎಡವಿದ್ದೇವೆ ಎಂದು ಚರ್ಚಿಸಬೇಕಾದ ಅನಿವಾರ್ಯತೆಯಿದೆ. ಇಂದಿನ ಸಮಾಜದಲ್ಲಿ ಬಾಹ್ಯ ಆಕರ್ಷಣೆಗೆ ರಾಜಮರ್ಯಾದೆ ದೊರಕುತ್ತಿದೆ, ಮಹಿಳೆಗೆ ಪೂರಕವಾದ ಕಾನೂನು ಕೊಟ್ಟರೂ, ಕೊಟ್ಟಂತಹ ಯೋಗ್ಯತೆಯನ್ನು ಉಳಿಸಿಕೊಂಡಿದ್ದೇವೆಯೇ ಎಂಬುದನ್ನು ವಿಶ್ಲೇಷಿಸಬೇಕಾಗಿದೆ ಎಂದು ನುಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ ಮಾತನಾಡಿ ನಮ್ಮ ಉಸಿರು ಪ್ರಾರಂಭವಾದಂದಿನಿಂದ ಹೆಣ್ಣು ಜೊತೆಯಾಗಿ ಇರಲೇಬೇಕು. ಮೊದಲಿಗೆ ತಾಯಿಯಾಗಿ, ಪತ್ನಿಯಾಗಿ, ಮಗಳಾಗಿ, ಸೊಸೆಯಾಗಿ ಇದು ಪುರುಷ ಮತ್ತು ಪ್ರಕೃತಿಯ ನಿಯಮ. ಮಹಿಳೆಯಿಲ್ಲದೆ ಪುರುಷಣೋರ್ವ ಅಪೂರ್ಣನು. ಹಾಗಾಗಿ ಹೆಣ್ಣನ್ನು ಗೌರವಿಸುವ ಮಹತ್ತರ ಜವಾಬ್ಧಾರಿಯನ್ನು ಹೊರಬೇಕಾಗಿದೆ.

ಇಂದಿನ ಜಮಾನದಲ್ಲಿ ಮೀಸಲಾತಿಯ ಅಗತ್ಯವೇ ಇಲ್ಲದೇ ಸ್ತ್ರೀಯರು ಬೆಳೆಯುತ್ತಿರುವುದು ಅಭಿನಂದನಾರ್ಹ. ಗುರಿ ರೂಪಿಸಿಕೊಳ್ಳುವದೇನೆಂದರೆ ದೊಡ್ಡ ವಿಷಯದ ಬಗೆಗೆ ಏಕಾಗ್ರತೆಯನ್ನಿಟ್ಟುಕೊಂಡಾಗ ಸಣ್ಣ ವಿಷಯಗಳನ್ನಾದರೂ ಸಾಧಿಸಬಹುದು. ಯಾವಾಗ ಸಂವಿಧಾನವನ್ನು ಗೌರವಿಸುತ್ತೇವೋ ಅಂದು ಸ್ತ್ರೀಯರಿಗೆ ಗೌರವ, ಸ್ಥಾನಮಾನ ದೊರೆಯುತ್ತೇವೆ.

ನ್ಯಾಯವಾದಿಗಳಾದ ಸಾಹಿರಾ ಕೆ. ಝುಬೈರ್, ಕುಮಾರಿ ರಾಜೇಶ್ವರಿ ಎಂ., ನ್ಯಾಯಲಯದ ಸಿಬ್ಬಂದಿ ಅಕ್ಷತಾ, ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯರು, ಉಪಸ್ಥಿತರಿದ್ದರು. ಪುತ್ತೂರು ಪ್ರಗತಿ ಸ್ಟಡಿ ಸೆಂಟರ್‌ನ ಉಪನ್ಯಾಸಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರಗತಿ ಸ್ಟಡಿ ಸೆಂಟರ್‌ನ ಆಂಗ್ಲಭಾಷಾ ಉಪನ್ಯಾಸಕಿ ವಿಸ್ಮಿತಾ ಮಧುಕರ್ ಮುಳಿಬೈಲು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅತಿಥಿಯಾಗಿ ಆಗಮಿಸಿದ್ದ ಪುತ್ತೂರು ವಕೀಲರ ಸಂಘದ ಕಾರ್ಯದರ್ಶಿ ಮಂಜುನಾಥ ಎನ್.ಎಸ್. ವಂದಿಸಿದರು. ಪುತ್ತೂರು ಆಡಳಿತ ಸಹಾಯಕ ತಾಲೂಕು ಕಾನೂನು ಸೇವೆಗಳ ಸಮಿತಿ ಡಿ. ರಂಗಪ್ಪ ಪೂಜಾರಿ ಸಹಕರಿಸಿದರು.